
ನವದೆಹಲಿ: ಬೇರೆಯವರು ನಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಚೆಲ್ಲಾಟವಾಡದಿರದಂತೆ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸ್ಮಾರ್ಟ್‌ಫೋನ್ ಪಾಸ್‌ವರ್ಡ್ ರಕ್ಷಿಸುವ ಹವ್ಯಾಸವಿರುತ್ತದೆ. ಆದರೆ, ಕೆಲಬಾರಿ ಪಾಸ್‌ವರ್ಡ್‌ಮರೆತುಹೋಗುತ್ತೇವೆ. ಪಾಸ್‌ವರ್ಡ್ ಮರೆತುಹೋದಾಗ ಏನು ಮಾಡಬೇಕು ಎನ್ನುವ ಆತಂಕ ಕಾಡುತ್ತದೆ.
ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಪಾಸ್‌ವರ್ಡ್ ಮರೆತುಹೋದಲ್ಲಿ ನೀವು ಹೀಗೆ ಮಾಡಿ.
ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್ ಸ್ವಿಚ್‌ಆಫ್ ಮಾಡಿ.
ನಂತರ ವ್ಯಾಲೂಮ್ ಬಟನ್, ಪವರ್ ಬಟನ್ ಮತ್ತು ಹೋಮ್ ಸ್ಕ್ರೀನ್ ಬಟನ್ ಎಲ್ಲವನ್ನು ಒಂದೇ ಬಾರಿಗೆ ಪ್ರೆಸ್ ಮಾಡಿ,
ನಿಮಗೆ ಐದು ಆಯ್ಕೆಗಳು ಕಂಡುಬರುತ್ತವೆ.
ರೆಬೂಟ್ ಡಟಾ
ವೈಪ್ ಡಟಾ/ ಫ್ಯಾಕ್ಟರಿ ರಿಸೆಟ್
ಇನ್‌ಸ್ಟಾಲ್ ಅಪ್‌ಡೇಟ್
ಪವರ್ ಡೌನ್
ಅಡ್ವಾನ್ಸ್ ಆಪ್ಶನ್.
ವೈಪ್ ಡಟಾ/ ಫ್ಯಾಕ್ಟರಿ ರಿಸೆಟ್ ಡೇಟಾವನ್ನು ಆಯ್ಕೆ ಮಾಡಿ ಎಸ್ ಎನ್ನುವ ಬಟನ್ ಪ್ರೆಸ್ ಮಾಡಿ. ಅದಕ್ಕಿಂತ ಮೊದಲು ನೀವು ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದಲ್ಲಿ ಒಂದು ಬಾರಿ ನೀವು ಎಸ್ ಎಂದು ಆಯ್ಕೆ ಮಾಡಿದಲ್ಲಿ ಹಿಂದಿನ ಡೇಟಾ ಅಳಿಸಿಹೋಗುತ್ತದೆ. ಅದ್ದರಿಂದ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾಗೆ ಬ್ಯಾಕಪ್ ಹೊಂದುವುದು ಸೂಕ್ತ.
ಸ್ವಲ್ಪ ಹೊತ್ತಿನ ನಂತರ, ನಿಮ್ಮ ಫೋನ್‌ನ್ನು ರಿಸ್ಟಾರ್ಟ್ ಮಾಡಿ. ಇದೀಗ ನೀವು ಸುಲಭವಾಗಿ ಫೋನ್‌ನ್ನು ಅನ್‌ಲಾಕ್ ಮಾಡಿ ಹೊಸ ಲಾಕ್ ಪಡೆಯಬಹುದು.
Comments are closed.