ರಾಷ್ಟ್ರೀಯ

ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಗೆ ಮುಕ್ತಹಸ್ತ ನೀಡಿ ಎಂದು ಪರಿಕ್ಕರ್ ಗೆ ಸಲಹೆ ನೀಡಿದ ಮೋದಿ

Pinterest LinkedIn Tumblr

manohar-parrikar-and-narendra-modi

ನವದೆಹಲಿ: ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿ ಸಂಬಂಧ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಜೊತೆ ಪ್ರಧಾನಿ ನರೇಂದ್ರ ಸಮಾಲೋಚನೆ ನಡೆಸಿದರು. ಈ ವೇಳೆ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆಗೆ ಮುಕ್ತಹಸ್ತ ಸ್ವಾತಂತ್ರ್ಯ ನೀಡಿ ಎಂದು ಮೋದಿ ಪರಿಕ್ಕರ್ ಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮೋದಿ ಅವರ ಸಲಹೆಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಉಗ್ರರಿಗೆ ಶಿಕ್ಷೆ ನೀಡದೇ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಉಗ್ರರ ದಾಳಿಗೆ ಸರಿಯಾದ ಕ್ರಮ ಹಾಗೂ ಪ್ರತಿದಾಳಿ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು ಗಡಿ ನುಸುಳುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿರುವ ಭಾರತೀಯ ಯೋಧರಿಗೆ ಮುಕ್ತ ಹಸ್ತ ನೀಡಬೆಂಕೆದು ಎಂದು ಹೇಳಿದ್ದಾರೆ.

ಗಡಿ ನುಸುಳಿ ಉಗ್ರರು ಒಳ ನುಗ್ಗುತ್ತಿರುವುದನ್ನು ನೋಡಿಕೊಂಡು ಸರ್ಕಾರ ಕಣ್ಮುಚ್ಚಿ ಕುಳಿತಿಲ್ಲ, ಸೇನೆ ಕಡೆಯಿಂದ ಏನೋ ಒಂದು ತಪ್ಪು ಆಗಿ ಹೋಗಿರಬಹುದು. ಅದೊಂದು ಸೂಕ್ಷ್ಮ ವಿಚಾರ, ಅದರ ವಿವರವನ್ನು ನಾನು ಇಲ್ಲಿ ಬಿಚ್ಚಿಡಲು ಸಾಧ್ಯವಿಲ್ಲ, ಆದರೆ ಮುಂದೆ ಹೀಗಾಗದಂತೆ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

Comments are closed.