ರಾಷ್ಟ್ರೀಯ

ವಿದ್ಯಾರ್ಥಿನಿಗೆ ಕಿರುಕುಳ: ಸಮುದಾಯಗಳ ನಡುವೆ ಮಾರಾಮಾರಿ, 3 ಸಾವು

Pinterest LinkedIn Tumblr

police

ಜಿಜ್ನೂರ್(ಉತ್ತರಪ್ರದೇಶ): ಶಾಲಾ ವಿದ್ಯಾರ್ಥಿನಿಗೆ ಕೆಲ ಯುವಕರು ಕಿರುಕುಳ ನೀಡಿದ್ದು ಎರಡು ಸಮುದಾಯಗಳ ನಡುವಿನ ಮಾರಾಮಾರಿಗೆ ಕಾರಣವಾಗಿದ್ದು ಮೂವರು ಸಾವನ್ನಪ್ಪಿದ್ದಾರೆ.
ಜಿಜ್ನೂರ್ ಜಿಲ್ಲೆಯ ಪೇದ ಗ್ರಾಮದಲ್ಲಿ ಬೆಳಗ್ಗೆ 8.15ರ ಸುಮಾರಿಗೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಮತ್ತೊಂದು ಸಮುದಾಯದ ಯುವಕರು ಕಿರುಕುಳ ನೀಡಿದ್ದರಿಂದ ಎರಡು ಸಮುದಾಯಗಳ ನಡುವಿನ ಮಾರಾಮಾರಿಗೆ ಕಾರಣವಾಗಿದೆ. ಈ ಮಾರಾಮಾರಿಯಲ್ಲಿ ಮೂವರು ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿದ್ದು, ಐವರ ಪರಿಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಮೀರುತ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಮುದಾಯಗಳ ನಡುವಿನ ಮಾರಾಮಾರಿಯಿಂದಾಗಿ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಾಗಿದೆ. ಸದ್ಯ ಪರಿಸ್ಥಿತಿ ಹಿಡಿತದಲ್ಲಿದೆ ಡಿಜಿಪಿ ಜಾವೇದ್ ಅಹ್ಮದ್ ಹೇಳಿದ್ದಾರೆ.

Comments are closed.