ಹೊಸದಿಲ್ಲಿ, ಸೆ.16: ಗುರುವಾರ ಮಧ್ಯರಾತ್ರಿಯಿಂದ ಪೆಟ್ರೋಲ್ಗೆ 58 ಪೈಸೆ ಏರಿಕೆಯಾಗಿದೆ. ಇದೇ ವೇಳೆ ಡೀಸೆಲ್ಗೆ 31 ಪೈಸೆ ಇಳಿಕೆಯಾಗಿದೆ.ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರವನ್ನು ಏರಿಕೆ ಮಾಡಿದ್ದು, ಡೀಸೆಲ್ ದರದಲ್ಲಿ ಅಲ್ಪ ಇಳಿಕೆ ಮಾಡಿವೆ. ಪರಿಷ್ಕೃತ ದರದಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 58 ಪೈಸೆ ಏರಿಕೆಯಾಗಿದೆ. ಅಂತೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆ 31 ಪೈಸೆ ಇಳಿಕೆಯಾಗಿದೆ.
ಆ.31ರಂದು ಪ್ರತಿ ಲೀಟರ್ ಪೆಟ್ರೋಲ್ 3.38 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಗೆ 2.67 ರೂ. ಏರಿಕೆ ಮಾಡಲಾಗಿತ್ತು. ಆ.15 ರಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಕಡಿತ ಮಾಡಲಾಗಿತ್ತು. ಲೀಟರ್ ಪೆಟ್ರೋಲ್ ಗೆ 1 ರೂ. ಕಡಿತ ಮಾಡಿದ್ದರೆ, ಡಿಸೇಲ್ ದರವನ್ನು 2 ರೂ. ಇಳಿಕೆಯಾಗಿತ್ತು.

Comments are closed.