
ಚೆನ್ನೈ: ಯುವತಿಯೊಬ್ಬಳನ್ನು ಆಕೆಯ ಮನೆಯಲ್ಲೇ ಭೀಕರವಾಗಿ ಹತ್ಯೆಗೈದಿರೋ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣೂರಿನಲ್ಲಿ ನಡೆದಿದೆ.
23 ವರ್ಷದ ಧನ್ಯಾ ಹತ್ಯೆಗೀಡಾದ ಯುವತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಧನ್ಯಾ ತನ್ನ ತಂದೆಯ ಟೈಲರಿಂಗ್ ಬಿಜಿನೆಸ್‍ನಲ್ಲಿ ಸಹಾಯ ಮಾಡುತ್ತಿದ್ದಳು.
ಬುಧವಾರದಂದು ಧನ್ಯಾಳ ಪೋಷಕರಾದ ಸೋಮಸುಂದರಂ ಹಾಗೂ ಶಾರದಾ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅವರು ಹಿಂದಿರುಗಿ ಬಂದು ಮನೆಯ ಬಾಗಿಲು ತರೆದು ನೋಡಿದಾಗ ಧನ್ಯಾ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದಳು. ಧನ್ಯಾ ಪೋಷಕರು ಮನೆಯಿಂದ ಹೊರಡುವ ಮುನ್ನ ಬಾಗಿಲನ್ನ ಲಾಕ್ ಮಾಡಿದ್ದರು. ಹೀಗಾಗಿ ಕೊಲೆಗಾರ ಹಿಂದಿನ ಬಾಗಿಲಿನಿಂದ ಮನೆಗೆ ನುಗಿದ್ದಾನೆ ಎಂದು ಅವರು ಹೇಳಿದ್ದಾರೆ.
27 ವರ್ಷದ ವ್ಯಕ್ತಿ ಧನ್ಯಾಳನ್ನ ಪ್ರೀತಿಸುವಂತೆ ಪೀಡಸುತ್ತಿದ್ದ ಅಂತ ಧನ್ಯಾ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಅವರ ಹೇಳಿಕೆಯ ಮೇರೆಗೆ ಝಾಕಿರ್ ಎಂಬಾತನನ್ನು ಬಂಧಿಸಲು ಹೋದಾಗ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಪ್ರಜ್ಞೆ ಇಲ್ಲದೆ ಬಿದ್ದಿದ ಆತನನ್ನು ಕೂಡಲೇ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಧನ್ಯಾಗೆ ಎಂಗೇಜ್ಮೆಂಟ್ ಆಗಿತ್ತು. ಶೀಘ್ರದಲ್ಲೇ ಆಕೆಯ ಮದುವೆಯೂ ನಡೆಯಬೇಕಿತ್ತು. ಆದ್ರೆ ಅದಕ್ಕೂ ಮೊದಲೇ ಆಕೆ ಬಾರದ ಲೋಕಕ್ಕೆ ಹೋಗಿದ್ದಾಳೆ. ಧನ್ಯಾ ಸಾವಿನ ಹಿನ್ನೆಲೆಯಲ್ಲಿ ಸ್ಥಳೀಯರು ಇಂದು ಅಣ್ಣೂರಿನಲ್ಲಿ ಬಂದ್ ಆಚರಿಸುತ್ತಿದ್ದು, ಕೊಲೆಗಾರನಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
Comments are closed.