ರಾಷ್ಟ್ರೀಯ

ಅನೈತಿಕ ಸಂಬಂಧದ ಶಂಕೆ: ಪತ್ನಿಗೆ 24 ಬಾರಿ ಇರಿದು ಕೊಂದ ಪತಿ

Pinterest LinkedIn Tumblr

murder-newನವದೆಹಲಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತಿಗೆ 24 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ನವದೆಹಲಿಯ ವಿಕಾಸ್ ವಿಹಾರ್ ನಲ್ಲಿ ಭಾನುವಾರ ಮುಂಜಾನೆ ಈ ಅಮಾನುಷ ಕೃತ್ಯ ನಡೆದಿದೆ. ಹೆಂಡತಿಯನ್ನು ಇರಿದು ಕೊಂದ ನಂತರ ಆತ ತನ್ನ ಮಣಿಕಟ್ಟಿನ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪ್ರೇಮ್ ಸಿಂಗ್ ಶನಿವಾರ ತನ್ನ ಪತ್ನಿ ಸುಮನ್ ಹತ್ಯೆಗೆ ಯೋಜನೆ ರೂಪಿಸಿ 8 ಮತ್ತು 12 ವರ್ಷದ ತನ್ನ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದಿದ್ದ.
ಪ್ರೇಮ್ ಸಿಂಗ್ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.