ರಾಷ್ಟ್ರೀಯ

ಜಿಯೋ ಉಚಿತ ಕರೆ ಸೇವೆಯನ್ನು ನಿಲ್ಲಿಸಲು ಐಡಿಯಾ, ಏರ್’ಟೆಲ್, ವೋಡಪೋನ್ ಮಾಡಿದ್ದೇನು ಗೊತ್ತಾ..?

Pinterest LinkedIn Tumblr

jio

ದೆಹಲಿ: ದೇಶದ ಟೆಲಿಕಾಂ ವಲಯದಲ್ಲಿ ಕ್ರಾಂತಿಕಾರಕ ಸಂಚಲನವನ್ನು ಮೂಡಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್ ಗಳನ್ನು ಘೋಷಿಸಿದ್ದು, ಉಚಿತ ಡೇಟಾ, ಉಚಿತ ಕರೆ ಸೇವೆಗಳು ಇತರೆ ಕಂಪನಿಗಳಿಗೆ ಬಿಸಿ ತುಪ್ಪವಾಗಿದೆ.

ಜಿಯೋ ಇಂದು ಮಾರುಕಟ್ಟೆಯಲ್ಲಿರುವ ಇತರೆ ಕಂಪನಿಗಳಿಗೆ ನಡುಕ ತರಿಸಿದೆ. ಈ ಹಿನ್ನಲೆಯಲ್ಲಿ ಜಿಯೋ ಉಚಿತ ಸೇವೆಯನ್ನು ಹೇಗಾದರು ಮಾಡಿ ನಿಲ್ಲಿಸ ಬೇಕು ಎಂದು ಪಣಕ್ಕೆ ಬಿದ್ದಿರುವ ವಿವಿಧ ಕಂಪನಿಗಳು ಪ್ಲಾನ್ ರೆಡಿ ಮಾಡಿವೆ.

ಜಿಯೋ ಉಚಿತ ಕರೆ ಸೇವೆಯನ್ನು ನೀಡಿದರೆ ನಾವು ನಷ್ಟ ಅನುಭವಿಸ ಬೇಕಾಗುತ್ತದೆ ಎಂದು ತಮ್ಮ ವಾದ ಮಂಡಿಸುತ್ತಿರುವ ಐಡಿಯಾ, ವೊಡಾಪೋನ್ ಮತ್ತು ಏರ್ ಟೆಲ್ ಕಂಪನಿಗಳು ಟ್ರಾಯ್’ಗೆ ದೂರೊಂದನ್ನು ಸಲ್ಲಿಸಿವೆ.

ಸದ್ಯ ಟ್ರಾಯ್ ನಿಯಮದಂತೆ ಒಂದು ನೆಟ್ ವರ್ಕ್ ನಿಂದ ಇನ್ನೊಂದು ನೆಟ್ ವರ್ಕ್ ಗೆ ಕರೆ ಮಾಡಿದರೆ 14 ಪೈಸೆ ದರವನ್ನು ನಿಗದಿ ಮಾಡಿದೆ. ಆದರೆ ಈಗ ಉಚಿತ ಸೇವೆಯಿಂದ ನಮಗೆ ನಷ್ಟವಾಗಲಿದೆ, ಈ 14 ಪೈಸೆ ನಮಗೆ ನಷ್ಟವಾಗಲಿದೆ ಎಂಬುದು ಈ ಕಂಪನಿಗಳ ವಾದವಾಗಿದೆ.

ಜಿಯೋ ಡೇಟಾ ಆಧಾರಿತ ಕರೆ ಸೇವೆಯನ್ನು ನೀಡುತ್ತಿದೆ ಹಾಗಾಗಿ ಇಂಟರ್ ಕನೆಟ್ ದರಗಳು ಅಲ್ಲಿ ಬರುವುದಿಲ್ಲ, ಆದರೆ ಕರೆಯನ್ನು ಸ್ವೀಕರಿಸುವ ನಾವು 14 ಪೈಸೆ ನಷ್ಟ ಅನುಭವಿಸ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜಿಯೋದಿಂದ ನಮಗೆ 40 ಪೈಸೆ ಕೊಡಿಸ ಬೇಕು ಎಂದು ಟ್ರಾಯ್ ಬಳಿ ಅವಲತ್ತು ತೋಡಿಕೊಂಡಿದ್ದವು.

ಈ ವಿಚಾರವಾಗಿ ವಿಚಾರಣೆ ಸಹ ನಡೆದಿದ್ದು, ಜಿಯೋ ಡೇಟಾ ಆಧಾರಿತ ಕರೆ ಮಾಡುವ ವ್ಯವಸ್ಥೆ ಮಾಡಿರುವುದರಿಂದ ಇಂಟರ್ ಕನೆಟ್ ದರಗಳು ಅನ್ವಯ ಆಗುವುದಿಲ್ಲ. ಹಾಗಾಗಿ ಟ್ರಾಯ್ ಈ ವಿಚಾರವಾಗಿ ನೀವೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೈ ಚೆಲ್ಲಿದೆ. ಒಟ್ಟಿನಲ್ಲಿ ಹೇಗಾದರು ಜಿಯೋ ಕಾಲೆಳೆಯಲೇ ಬೇಕೆಂದಿರುವ ಈ ಕಂಪನಿಗಳು ಮುಂದೇನು ಮಾಡುತ್ತವೆ ಎಂದು ಕಾದು ನೋಡಬೇಕು.

Comments are closed.