ರಾಷ್ಟ್ರೀಯ

ಇನ್ನು ಮುಂದೆ ಮನೆಯಲ್ಲಿ ಮದ್ಯ ಸಿಕ್ಕರೆ ಕುಟುಂಬವೇ ಜೈಲಿಗೆ ಸೇರಬೇಕಾದೀತು…ಈ ಕಾನೂನು ಎಲ್ಲಿಯ ಜನರಿಗೆ ಗೊತ್ತಾ…?

Pinterest LinkedIn Tumblr

drinking

ಪಟ್ನಾ: ಬಿಹಾರದ ಯಾವುದೇ ಮನೆಯಲ್ಲಿ ಮದ್ಯ ಪತ್ತೆಯಾದರೆ ಇನ್ನು ಮುಂದೆ ಆ ಮನೆಯಲ್ಲಿನ ಎಲ್ಲ ವಯಸ್ಕ ಸದಸ್ಯರನ್ನು ಬಂಧಿಸಿ ಜೈಲಿಗಟ್ಟಬಹುದು!

ಮದ್ಯ ಸೇವನೆ, ಮಾರಾಟ, ಸಂಗ್ರಹ, ಉತ್ಪಾದನೆ ಮೇಲೆ ಹೇರಲಾಗಿರುವ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ನಿತೀಶ್‌ಕುಮಾರ್‌ನೇತೃತ್ವದ ಸರಕಾರ ಇಂತಹದ್ದೊಂದು ಕಾಯ್ದೆ ರೂಪಿಸಿದ್ದು, ಅದಕ್ಕೆ ಬಿಹಾರ ರಾಜ್ಯಪಾಲ ರಾಮನಾಥ ಕೋವಿಂದ್‌ಅವರು ಒಪ್ಪಿಗೆ ನೀಡಿದ್ದಾರೆ.

ಬಿಹಾರ ಪಾನ ನಿಷೇಧ ಹಾಗೂ ಅಬಕಾರಿ ಮಸೂದೆ- 2016ಕ್ಕೆ ಅವರು ಬುಧವಾರವಷ್ಟೇ ಸಹಿ ಹಾಕಿದ್ದಾರೆ.

ಪದೇಪದೇ ನಿಯಮ ಉಲ್ಲಂಘನೆಯಾದರೆ ಒಂದು ಗ್ರಾಮ ಹಾಗೂ ಪ್ರದೇಶದಲ್ಲಿ ವಾಸಿಸುವ ಜನರ ಮೇಲೆ ಸಾಮೂಹಿಕವಾಗಿ ದಂಡ ವಿಧಿಸುವ ಪ್ರಸ್ತಾವ ಹೊಸ ಕಾಯ್ದೆಯಲ್ಲಿದೆ. ಕಳೆದ ಆಗಸ್ಟ್‌ನಲ್ಲಿ ಈ ವಿಧೇಯಕಕ್ಕೆ ಬಿಹಾರ ವಿಧಾನಮಂಡಲದ ಉಭಯ ಸದನಗಳೂ ಒಪ್ಪಿಗೆ ನೀಡಿದ್ದವು. ಅದಕ್ಕೆ ರಾಜ್ಯಪಾಲರು ಇದೀಗ ಸಹಿ ಮಾಡುವುದರೊಂದಿಗೆ ಅದು ಕಾಯ್ದೆಯಾಗಿ ರೂಪಾಂತರಗೊಂಡಿದೆ. ಈ ಕುರಿತು ಸರಕಾರ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.

Comments are closed.