ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಹುಲ್, ರಾಮಜನ್ಮಭೂಮಿ-ಬಾಬ್ರಿಯಿಂದ ದೂರ ಉಳಿದ ಕಾಂಗ್ರೆಸ್ ನಾಯಕ

Pinterest LinkedIn Tumblr

rahul-9ಲಖನೌ: ಉತ್ತರ ಪ್ರದೇಶದ ಡೆಯೋರಿಯಾದಿಂದ ದೆಹಲಿಗೆ 2500 ಕಿ.ಮೀ ದೂರದ ಕಿಸಾನ್ ಮಹಾಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿದ್ದು, ಈ ಮೂಲಕ 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯ ನಂತರ ಆಯೋಧ್ಯಗೆ ಭೇಟಿ ನೀಡಿದ ನೆಹರು-ಗಾಂಧಿ ಕುಟುಂಬದ ಮೊದಲ ವ್ಯಕ್ತಿ ಅನಿಸಿಕೊಂಡಿದ್ದಾರೆ. ಆದರೆ ವಿವಾದಿತ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ತಾಣದಿಂದ ದೂರ ಉಳಿದಿದ್ದಾರೆ.
ಮಹಾಯಾತ್ರೆಯ ನಾಲ್ಕನೆ ದಿನವಾದ ಇಂದು ಅಯೋಧ್ಯೆಯಲ್ಲಿರುವ ಹನುಮಾನ್ ಗರ್ಹಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಾಹುಲ್ ಗಾಂಧಿ ವಿವಾದಿತ ರಾಮಜನ್ಮಭೂಮಿ – ಬಾಬರಿ ತಾಣಕ್ಕೆ ಭೇಟಿ ನೀಡಲಿಲ್ಲ.
ಇದೇ ವೇಳೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಬೇಕೆಂದು ಪ್ರತಿಪಾದಿಸುತ್ತಾ ಬಂದಿರುವ ವಿಶ್ವ ಹಿಂದೂ ಪರಿಷತ್ ವಿರುದ್ಧದ ಕಟ್ಟಾ ಟೀಕಾಕಾರರಾಗಿರುವ ಮಹಾಂತ ಜ್ಞಾನ್‌ ದಾಸ್‌ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದರು.
ರಾಮಜನ್ಮಭೂಮಿ ಹಾಗೂ ಬಾಬರಿ ಮಸೀದಿಯಿಂದ ಹನುಮಾನ್ ಗರ್ಹಿ ದೇವಾಲಯ ಕೇವಲ ಒಂದು ಕಿ.ಮೀ.ದೂರದಲ್ಲಿದೆ. ಆದರೂ ಇಲ್ಲಿಗೆ ಭೇಟಿ ನೀಡದೆ ಅಂಬೆಡ್ಕರ್ ನಗರದಲ್ಲಿರುವ ಕಿಚೌಚ ಶರೀಫ್ ದರ್ಗಾಗೆ ಭೇಟಿ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ.

Comments are closed.