
ಫಥೇಗಡ ಸಾಹಿಬ್ (ಪಂಜಾಬ್) (ಪಿಟಿಐ): ಚುನಾವಣಾ ಪ್ರಚಾರ ರ್‌್ಯಾಲಿ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಅನುಚಿತವಾಗಿ ವರ್ತಿಸಿದ ಸಂಬಂಧ ಎಎಪಿ ಸಂಸದ ಭಗವಂತ್ ಮನ್ ಮತ್ತು ಅವರ ಇತರರ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಇಲ್ಲಿನ ಬಸ್ಸಿ ಪಠಾಣಾದಲ್ಲಿ ಶುಕ್ರವಾರ ನಡೆದ ಚುನಾವಣಾ ರ್‌್ಯಾಲಿಗೆ ಮನ್ ನಿಗದಿತ ಸಮಯಕ್ಕಿಂತ ತಡವಾಗಿ ಬಂದಿದ್ದರು. ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರನ್ನು ಅವರು ನಿಂದಿಸಿದರು ಎಂದು ಕೆಲವು ಪತ್ರಕರ್ತರು ದೂರು ನೀಡಿದ್ದರು.
ಜತೆಗೆ ಮನ್ ಅವರ ಸಂಗಡಿಗರು ಕೆಲವು ಪತ್ರಕರ್ತರ ಮೇಲೆ ನಡೆಸಿದರು. ಒಬ್ಬರ ಕ್ಯಾಮೆರಾ ಒಡೆದು ಹಾಕಿದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು.
Comments are closed.