ನವದೆಹಲಿ: ಬಿಹಾರ ರೈತರ ಬೆಳೆ ನಾಶ ಮಾಡುತ್ತಿದ್ದ ನೀಲ್ಗೈ (ನೀಲ್ ಜಿಂಕೆ), ಹಿಮಾಚಲ ಪ್ರದೇಶದ ಕೆನ್ನೆ ಚೀಲ, ಉದ್ದ ಬಾಲದ ಕೋತಿ ಮತ್ತು ಉತ್ತರಾಖಂಡದ ಕಾಡುಹಂದಿಗಳ ಸಾಮೂಹಿಕ ಹತ್ಯೆ ಸಂಬಂಧ ಹೊರಡಿಸಲಾಗಿದ್ದ ಸರ್ಕಾರ ಪ್ರಕರಣೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಈ ಮೂರು ಪ್ರಾಣಿ ಪ್ರಭೇದಗಳು ಮಾನವರಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಠಿಸಲು ಆರಂಭಿಸಿವೆ. ಆದ್ದರಿಂದ ಸೀಮಿತ ಅವಧಿಗೆ ಅವುಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಪ್ರಾಣಿಗಳ ಹಕ್ಕುಗಳ ಹೋರಾಟಗಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನೀಲ್ಗೈ (ನೀಲ್ ಜಿಂಕೆ), ಹಿಮಾಚಲ ಪ್ರದೇಶದ ಕೆನ್ನೆ ಚೀಲ, ಉದ್ದ ಬಾಲದ ಕೋತಿ ಮತ್ತು ಉತ್ತರಾಖಂಡದ ಕಾಡುಹಂದಿಗಳ ಸಾಮೂಹಿಕ ಹತ್ಯೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಅರಣ್ಯದಿಂದ ಹೊರಗೆ ಮನುಷ್ಯರಿಗೆ ಕಾಟ ಕೊಡುವ ಪ್ರದೇಶಗಳಲ್ಲಿ ಈ ಪ್ರಾಣಿಗಳನ್ನು ಕೊಲ್ಲಲಾಗುವುದು ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ನೀಡಿದ ಹೇಳಿಕೆಯನ್ನು ಸುಪ್ರೀಂಕೋರ್ಟ್ ದಾಖಲಿಸಿತ್ತು.
ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಬರುವ ಪಶು ಕಲ್ಯಾಣ ಇಲಾಖೆಯು ಅರ್ಜಿದಾರರನ್ನು ಬೆಂಬಲಿಸಿತ್ತು.
Comments are closed.