ದೆಹಲಿ: 68 ವರ್ಷದ ನಟಿ, ರಾಜಕಾರಣಿ ಜಯಾ ಬಚ್ಚನ್ ಸಾರ್ವಜನಿಕರೊಬ್ಬರು ತೆಗೆದ ಫೊಟೋಕ್ಕಾಗಿ ಗದ್ದಲ ಮಾಡಿದ್ದಾರೆ. ಮಹಿಳೆಯೊಬ್ಬರು ಫೊಟೋ ತೆಗೆದಿರುವುದಕ್ಕೆ ಸಿಖಾಪಟ್ಟೆ ಜಯಾ ಬಚ್ಚನ್ ಬೈಯ್ದಿರುವ ಘಟನೆ ನಡೆದಿದೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಈ ವೇಳೆ ಸಾರ್ವಜನಿಕರೊಬ್ಬರು ತೆಗೆದ ಫೊಟೋಕ್ಕಾಗಿ ಜಗಳವಾಡಿದ್ದಾರೆ. ‘ಫೊಟೋ ತೆಗೆಯುವುದನ್ನು ನಿಲ್ಲಿಸು, ನನಗೆ ಇಷ್ಟವಿಲ್ಲ, ನಿನ್ನ ಹತ್ತಿರ ಬೇಸಿಕ್ ಮ್ಯಾನರ್ಸ್ ಇಲ್ಲವಾ? ಎಂದು ಜಯಾ ಬಚ್ಚನ್ ಗುಡುಗಿದ್ದಾರೆ.
ನಿನ್ನ ಹತ್ತಿರ ಮೂಬೈಲ್ ಹಾಗೂ ಕ್ಯಾಮರಾ ಇದೆ ಎಂದ ಮಾತ್ರಕ್ಕೆ ಯಾರನ್ನು ಅನುಮತಿ ಪಡೆಯದೇ ನೀನು ಫೊಟೋ ತೆಗೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇಂಥ ಅಭ್ಯಾಸಗಳು ಪೋಷಕರು ತಮ್ಮ ಮಕ್ಕಳಿಗೆ ಕಲಿಸಬಾರದು ಎಂದು ಇದೇ ವೇಳೆ ತಿಳಿಸಿದರು.
‘ನನಗೆ ಇದು ತುಂಬಾ ಕಿರಿ ಕಿರಿ ಉಂಟು ಮಾಡಿದೆ’. ‘ನನಗೆ ಇದನ್ನು ಹೇಳಲು ಸ್ವಾತಂತ್ರ್ಯವಿದೆ’. ‘ನಾನು ಅಶಿಸ್ತನ್ನು ಇಷ್ಟಪಡುವುದಿಲ್ಲ’ ಎಂದು ತಿಳಿಸಿದ್ದಾರೆ.
Comments are closed.