ಹೈದರಾಬಾದ್ : ದುಬೈನಿಂದ ಪಿಲಿಫೈನ್ಸ್ ಗೆ ಹಾರಾಟ ನಡೆಸುತ್ತಿದ್ದ ಸಿಬು ಫೆಸಿಫಿಕ್ ವಿಮಾನದಲ್ಲಿ ಪ್ರಯಾಣಿಕ ಮಹಿಳೆಯೊಬ್ಬಳಿಗೆ ಅವಧಿಪೂರ್ಣ ಹೆರಿಗೆಯಾದ ಹಿನ್ನಲೆಯಲ್ಲಿ ವಿಮಾನವನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್ ಮಾಡಿದ ಘಟನೆ ಭಾನುವಾರ ನಡೆದಿದೆ.
ಎಡಡು ತಿಂಗಳು ಮುಂಚಿತವಾಗಿಯೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ನರಳಲು ಶುರು ಮಾಡಿದ್ದಾಳೆ .ಈ ವೇಳೆ ವಿಮಾನ ಸಿಬ್ಬಂದಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅದೃಷ್ಟವೆಂದರೆ ವಿಮಾನ ಪ್ರಯಾಣಿಕರಲ್ಲಿದ್ದ ಇಬ್ಬರು ನರ್ಸ್‌ಗಳು ಹೆರಿಗೆಗೆ ಸಹಕರಿಸಿದ್ದಾರೆ. ವಿಮಾನದ ಮುಂದಿನ ಕ್ಯಾಬಿನ್‌ನನ್ನೇ ತಾತ್ಕಾಲಿಕವಾಗಿ ಹೆರಿಗೆ ವಾರ್ಡ್ ಆಗಿ ಮಾಡಲಾಗಿತ್ತು. ಪ್ರಯಾಣಿಕರು ತಮ್ಮಲ್ಲಿದ್ದ ಬಟ್ಟೆಗಳನ್ನು ನೀಡಿ ಮಾನವೀಯತೆ ಮೆರೆದರು.
ಹೆರಿಗೆ ಬಳಿಕ ತಾಯಿ ಮತ್ತು ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದರು. ಆದರೂ ಹೈದರಾಬಾದ್‌ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಿ ಬಾಣಂತಿಗೆ ಅಗತ್ಯವಾಗಿದ್ದ ಚಿಕಿತ್ಸೆ ಮತ್ತು ಔಷಧೋಪಚಾರ ಕೋಡಿಸಿದ ಬಳಿಕ ವಿಮಾನ ಮಾನಿಲಾಗೆ ಪ್ರಯಾಣ ಮುಂದುವರಿಸಿದೆ.
-ಉದಯವಾಣಿ
Comments are closed.