ರಾಷ್ಟ್ರೀಯ

ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷವನ್ನು ನಾಶ ಮಾಡಿದ್ದಾರೆ, ಸಚಿವರು ಪಕ್ಷಕ್ಕೆ ಹೊರೆಯಾಗಿದ್ದಾರೆ: ಮುಲಾಯಂ ಸಿಂಗ್

Pinterest LinkedIn Tumblr

Mulayam-Singh-Yadavಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣಾ ಹತ್ತಿರವಾಗುತ್ತಿದ್ದಂತಯೇ ಸಮಾಜವಾದಿ ಪಕ್ಷದಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಗಿದೆ.

ಉತ್ತರ ಪ್ರದೇಶದ ಸಚಿವ ಶಿವ್ ಪಾಲ್ ಯಾದವ್ ಬಗ್ಗೆ ಮುಲಾಯಂ ಸಿಂಗ್ ಯಾದವ್ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದು, ಶಿವ್ ಪಾಲ್ ಯಾದವ್ ಈ ಹಿಂದೆ ಎರಡು ಬಾರಿ ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಆದರೆ ನನ್ನ ಮನವಿಯ ಮೇರೆಗೆ ಹಿಂಪಡೆದರು ಎಂದು ತಿಳಿಸಿದ್ದಾರೆ.

ನಾನು ಶಿವ್ ಪಾಲ್ ಯಾದವ್ ಅವರನ್ನು ಎರಡು ಬಾರಿ ತಡೆದಿದ್ದೇನೆ, ಒಂದು ವೇಳೆ ಅವರು ಪಕ್ಷ ತೊರೆದರೆ ಪಕ್ಷ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಮುಲಾಯಂ ಸಿಂಗ್ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವ ಶಿವ್ ಪಾಲ್ ಯಾದವ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಶಿವ್ ಪಾಲ್ ಯಾದವ್ ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಅವರಿಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಮುಲಾಯಂ ಸಿಂಗ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿರುವ ಈಗಿನ ಸರ್ಕಾರಕ್ಕೆ ಕೆಲಸ ಮಾಡುವುದು ಬೇಕಿಲ್ಲ. ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷವನ್ನು ಸಂಪೂರ್ಣವಾಗಿ ನಾಶಮಾಡಿದ್ದಾರೆ. ಅಖಿಲೇಶ್ ಯಾದವ್ ಸರ್ಕಾರದ ಮಂತ್ರಿಗಳು ಪಕ್ಷಕ್ಕೆ ಹೊರೆಯಾಗಿದ್ದಾರೆ. ಸಚಿವ ಸಂಪುಟದಲ್ಲಿ ಕೆಲವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮುಲಾಯಂ ಸಿಂಗ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.