ರಾಷ್ಟ್ರೀಯ

ಅಮೆರಿಕದಲ್ಲಿ ಶಾರುಖ್‌ರನ್ನು ತಡೆಹಿಡಿದಿದ್ದರಲ್ಲಿ ವಿಶೇಷವೇನು?: ತಸ್ಲಿಮಾ

Pinterest LinkedIn Tumblr

Taslima-600ಹೊಸದಿಲ್ಲಿ : “ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಅಲ್ಲಿನ ವಲಸೆ ಅಧಿಕಾರಿಗಳು ತಡೆ ಹಿಡಿದು ಪ್ರಶ್ನಿಸಿದ್ದಾರೆ ನಿಜ; ಅದರಲ್ಲೇನು ವಿಶೇಷ ! ಆತ ಸಿನೆಮಾ ತಾರೆಯಾಗಿರುವುದು ಭಾರತದಲ್ಲೇ ಹೊರತು ಅಮೆರಿಕದಲ್ಲಿ ಅಲ್ಲ. ಅಂದ ಹಾಗೆ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ದಿನ ನಿತ್ಯ ಅನೇಕ ಮುಸ್ಲಿಮರನ್ನು ತಡೆ ಹಿಡಿದು ಪ್ರಶ್ನಿಸಲಾಗುತ್ತದೆ’ ಎಂದು ಖ್ಯಾತ ವಿವಾದಾತ್ಮಕ ದೇಶಭ್ರಷ್ಟ ಲೇಖಕಿ ತಸ್ಲಿಮಾ ನಸ್ರಿನ್‌ ಪ್ರತಿಕ್ರಿಯಿಸಿದ್ದಾರೆ.

“ನಿಜ ಏನೆಂದರೆ ವಿಶ್ವಾದ್ಯಂತ ಇವತ್ತು ಮುಸ್ಲಿಮರನ್ನು ಮುಸ್ಲಿಮೇತರರು ನಂಬುವುದಿಲ್ಲ. ಮುಸ್ಲಿಂ ಭಯೋತ್ಪಾದಕರು ಅಮಾಯಕ ಜನರನ್ನು ಕೊಲ್ಲುತ್ತಿದ್ದಾರೆ. ನೀವು ಮುಸ್ಲಿಮರೆಂದಾದರೆ ನೀವು ಭಯೋತ್ಪಾದಕರೆಂದೇ ಜನರು ಶಂಕಿಸುತ್ತಾರೆ. ಹಾಗಾಗಿ ಇವತ್ತು ವಿಶ್ವಾದ್ಯಂತ ಅಮಾಯಕ ಮುಸ್ಲಿಮರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ತಸ್ಲಿಮಾ ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

“ಶಾರುಖ್‌ ಖಾನ್‌ ಅವರನ್ನು ಈ ಹಿಂದೆಯೂ ಅಮೆರಿಕದ ವಲಸೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿದದ್ದುಂಟು. ಒಂದು ಸಲ ನೀವು ತಡೆಹಿಡಿಯಲ್ಪಟ್ಟವರಾದರೆ ಅಮೆರಿಕನ್‌ ಅಧಿಕಾರಿಗಳ ಕಂಪ್ಯೂಟರ್‌ ನಿಮ್ಮನ್ನು ಯಾವತ್ತೂ ತಡೆಹಿಡಿಯಲ್ಪಟ್ಟವರೆಂದೇ ಗುರುತಿಸುತ್ತದೆ. ಹಾಗಾಗಿ ಸಹಜವಾಗಿಯೇ ಶಾರುಖ್‌ ಅವರನ್ನು ಈ ಬಾರಿಯೂ ವಲಸೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಡೆಹಿಡಿದಿದ್ದಾರೆ’ ಎಂದು ತಸ್ಲಿಮಾ ಪ್ರತಿಕ್ರಿಯಿಸಿದ್ದಾರೆ.

-ಉದಯವಾಣಿ

Comments are closed.