ನವದೆಹಲಿ: ಸಾಮಾನ್ಯವಾಗಿ ಪುರುಷರಿಗೆ ತಮ್ಮ ಮೊಬೈಲ್ ಪೋನ್ ಅನ್ನು ಪ್ಯಾಂಟಿನ ಕಿಸೆಯಲ್ಲಿ ಇಟ್ಟುಕೊಳ್ಳುವುದು ರೂಢಿ. ಆದರೆ ಇದರಿಂದ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಹಲವು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. ಇದಕ್ಕೆ ಪೂರಕ ಎನ್ನುವಂತೆ ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್ನಲ್ಲಿ ಯುವಕನ ಪ್ಯಾಂಟ್ ಹಿಂಬದಿ ಕಿಸೆಯಲ್ಲಿದ್ದ ಆಪಲ್ 6 ಮೊಬೈಲ್ ಪೋನ್ ಸ್ಪೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
36ರ ಹರೆಯದ ಗಾರೆಥ್ ಕ್ಲಿಯರ್ ಗಾಯಗೊಂಡ ದುರ್ದೈವಿ. ಮೌಂಟನ್ ಬೈಕರ್ ಆಗಿರುವ ಇವರು ನ್ಯೂ ಸೌಥ್ ವೇಲ್ಸ್ನ ಮೆನ್ಲಿ ಅಣೆಕಟ್ಟಿನ ಸುತ್ತ ತಮ್ಮ ಬೈಕ್ನಲ್ಲಿ ಸಂಚರಿಸುತ್ತಿದ್ದರು. ಬೈಕ್ನಿಂದ ಕೆಳಗಿಳಿದ ಸಂದರ್ಭದಲ್ಲಿ ಹಿಂಬದಿ ಭಾಗದಲ್ಲಿ ಹೊಗೆ ಜತೆಗೆ ಬಿಸಿಯಾದ ಅನುಭವಾಗಿದೆ. ಅದಾಗಲೇ ಚರ್ಮದ ಎರಡು ಹೊದಿಕೆಗಳು ಸುಟ್ಟಿ ಕರಕಲಾಗಿತ್ತು. ಅಷ್ಟಕ್ಕೂ ಗಾರೆಥ್ ಮೊಬೈಲ್ ಖರೀದಿಸಿ ಕೇವಲ ಆರು ತಿಂಗಳಾಗಿತ್ತು.
ಇದೀಗ ರಾಯಲ್ ನಾರ್ಥ್ ಷೋರ್ ಆಸ್ಪತ್ರೆಯಲ್ಲಿ ಗಾರೆಥ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕ್ಲಿಯರ್, ಕಳೆದ ಹದಿನೆಂಟು ವರ್ಷಗಳಿಂದ ನಾನು ಮೊಬೈಲ್ ಪೋನ್ ಬಳಕೆ ಮಾಡುತ್ತಿ್ತುವೆ. ಆಪಲ್ ಮೊಬೈಲ್ ಪೋನ್ ಸ್ಪೋಟಗೊಳ್ಳಲು ಮೂಲ ಕಾರಣ ಬ್ಯಾಟರಿಯ ಮೆಟಲ್ ಕವಚ ತೆರೆದುಕೊಂಡಿರುವುದು. ನನ್ನ ಜೀವನ ಮೊಬೈಲ್ ಪೋನ್ ಸ್ಪೋಟದಿಂದ ದುಃಖಾಂತ್ಯವಾಗುತಿತ್ತು. ಪ್ರತಿಯೊಂದು ಆಪಲ್ ಪೋನ್ನಲ್ಲಿ ಕೂಡ ಈ ಸಮಸ್ಯೆ ಇರುವ ಸಾಧ್ಯತೆ ಇದ್ದು, ಕಂಪನಿ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅದೃಷ್ಟಕ್ಕೆ ನಾನು ದಪ್ಪನೆಯ ಬಟ್ಟೆ ಧರಿಸಿದ್ದೆ. ಇದರಿಂದಾಗಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ ಎಂದು ಕ್ಲಿಯರ್ ತಿಳಿಸಿದರು.
Comments are closed.