ರಾಷ್ಟ್ರೀಯ

SAMSANGನ ಜೆ ಬಗ್ಗೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ ನಕಲಿ ಎಸ್ಎಂಎಸ್

Pinterest LinkedIn Tumblr

whatsaap-1ಚೆನ್ನೈ: ಅಮೆಜಾನ್ ಸ್ಯಾಮ್ ಸಂಗ್ ನ ಜೆ 7 ಫೋನ್ ನನ್ನು 499 ಕ್ಕೆ ಮಾರಾಟ ಮಾಡುತ್ತಿದೆ ಎಂಬ ಸಂದೇಶ ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಮೂಲಕ ಹೆಚ್ಚು ಹರಿದಾಡುತ್ತಿದ್ದು, ಬ್ಯಾಂಕ್ ನ ವಿವರಗಳನ್ನು ಪಡೆಯುವುದಕ್ಕೆ ಉಪಯೋಗಿಸಲಾಗುತ್ತಿರುವ ಬಲೆ ಎಂಬ ಶಂಕೆ ವ್ಯಕ್ತವಾಗಿದೆ.

ಬ್ರೇಕಿಂಗ್ ನ್ಯೂಸ್, ಸುವರ್ಣ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸ್ಯಾಮ್ ಸಂಗ್ ಜೆ7 ಮೊಬೈಲ್ ನ್ನು ಅಮೆಜಾನ್ ಕೇವಲ 499 ಕ್ಕೆ ಮಾರಾಟ ಮಾಡುತ್ತಿದ್ದು ಆಫರ್ ಮುಕ್ತಾಯಗೊಳ್ಳುವುದರೊಳಗೆ ಖರೀದಿಸಲು http://amazon.mobile-flashsale.com/” ಗೆ ಭೇಟಿ ನೀಡಿ ಎಂಬ ಸಂದೇಶ ಹಂಚಿಕೆಯಾಗುತ್ತಿದೆ.

ಸಾಮಾನ್ಯವಾಗಿ ಅಮೆಜಾನ್ ತನ್ನ ಉತ್ಪನ್ನಗಳನ್ನು ತನ್ನ www.amazon.com ನಿಂದಲೇ ಮಾರಾಟ ಮಾಡುತ್ತದೆ. ಆದರೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಮೆಸೇಜ್ ನಲ್ಲಿ ಬೇರೆಯದ್ದೇ ಆದ ಆನ್ ಲೈನ್ ಲಿಂಕ್ ಇದೆ, ಮತ್ತೊಂದು ವಿಷಯವೆಂದರೆ 1994 ರಲ್ಲಿ ಪ್ರಾರಂಭವಾದ ಅಮೆಜಾನ್, ಭಾರತಕ್ಕೆ ಬಂದಿದ್ದು 2013 ರಲ್ಲಿ, ಮೆಸೇಜ್ ನಲ್ಲಿ ಮಾತ್ರ ಅಮೇಜಾನ್ ತನ್ನ ಸುವರ್ಣ ವಾರ್ಷಿಕೋತ್ಸವಕ್ಕೆ ಅಗ್ಗದ ದರದಲ್ಲಿ ಸ್ಯಾಮ್ ಸಂಗ್ ಮೊಬೈಲ್ ನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದೆ ಎಂದು ಹೇಳಲಾಗಿದೆ.ಆದರೆ 50 ವರ್ಷಗಳ ನಂತರ ಸುವರ್ಣ ವಾರ್ಷಿಕೋತ್ಸವ ಆಚರಣೆ ನಡೆಯಲಿದ್ದು ಅಮೆಜಾನ್ ಇಂತಹ ಆಚರಣೆ ನಡೆಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಮೆಸೇಜ್ ನ್ನು ನೋಡಿ ಲಿಂಕ್ ನ್ನು ಕ್ಲಿಕ್ಕಿಸಿದರೆ ಅದೇ ಮೆಸೇಜ್ ನ್ನು ಮತ್ತೊಮ್ಮೆ ಕನಿಷ್ಠ 8 ಜನರಿಗೆ ಹಂಚಿಕೆ ಮಾಡುವಂತೆ ಕೇಳಲಾಗುತ್ತದೆ. ಇದು ಹೀಗೆ ಹಂಚಿಕೆಯಾಗುತ್ತಿದ್ದು ಮೋಸದ ಮೆಸೇಜ್ ಎಂಬ ಶಂಕೆ ವ್ಯಕ್ತವಾಗಿದೆ. ತಜ್ಞರ ಪ್ರಕಾರ ವಾಟ್ಸ್ ಆಪ್ ನ ಬಳಕೆದಾರರ ಖಾಸಗಿ ವಿವರ, ಬ್ಯಾಂಕ್ ವಿವರಗಳನ್ನು ಪತ್ತೆ ಮಾಡಲು ಈ ರೀತಿಯ ಮೆಸೇಜ್ ಗಳನ್ನು ಕಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೆಸೇಜ್ ನ್ನು ಹಂಚಿಕೆ ಮಾಡಿ ಲಿಂಕ್ ಕ್ಲಿಕ್ ಮಾಡಿದರೆ ಅಸ್ತಿತ್ವದಲ್ಲಿಲ್ಲದ ವೆಬ್ ತಾಣಕ್ಕೆ ಕರೆದೊಯ್ಯುತ್ತಿದೆ.

Comments are closed.