ನವದೆಹಲಿ: ಜಗತ್ತಿನ ಅಗ್ಗದ ಸ್ಮಾರ್ಟ್ಫೋನ್ ತಯಾರಕರಾದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಫ್ರೀಡಂ-251 ಮೊಬೈಲ್ಗೆ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 4.8 ಕೋಟಿ ಜನ ಬುಕಿಂಗ್ ಮಾಡಿದ್ದಾರೆಂದು ಕಂಪನಿ ಸಿಇಓ ಮೋಹಿತ್ ಗೋಯಲ್ ತಿಳಿಸಿದ್ದಾರೆ.
ಶಿಕ್ಷಣ ವಂಚಿತ ಹಲವು ಜನರು ಈ ಎರಡು ರಾಜ್ಯಗಳಲ್ಲಿ ಹರಡಿದ್ದು, ಅಗ್ಗದ ಫೋನಿಗಾಗಿ ಮುಗಿ ಬೀಳುತ್ತಿದ್ದಾರೆ ಎಂದು ತಿಳಿದಿದೆ. 2.8 ಕೋಟಿ ಉತ್ತರ ಪ್ರದೇಶದಲ್ಲಿ ಬುಕಿಂಗ್ ಆಗಿದ್ದರೆ, 2 ಕೋಟಿ ಜನ ಬಿಹಾರದಲ್ಲಿ ಬುಕ್ ಮಾಡಿಕೊಂಡಿದ್ದಾರೆ.
ರಿಂಗಿಂಗ್ ಬೆಲ್ಸ್ ಪ್ರಥಮ ಹಂತದ ಫೋನ್ ಗ್ರಾಹಕರಿಗೆ ತಲುಪಿಸುವ ಕಾರ್ಯ ಪ್ರಾರಂಭಿಸಿದ್ದು, ಮೊದಲು 5 ಸಾವಿರ ಫೋನ್ ತಲುಪಿಸಿ ಗ್ರಾಹಕರಿಂದ ಬರುವ ಅಭಿಪ್ರಾಯ ಸಂಗ್ರಹಿಸಿ ನಂತರ 65 ಸಾವಿರ ಫೋನುಗಳನ್ನು ತಲುಪಿಸುವ ತಯಾರಿಯಲ್ಲಿದೆ.
ಪಶ್ಚಿಮ ಬಂಗಾಳ, ಹರ್ಯಾಣ, ಹಿಮಾಚಲ ಪ್ರದೇಶ, ಬಿಹಾರ, ಉತ್ತರಾಖಂಡ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಇದೇ ರಾಜ್ಯಗಳಿಗೆ ಮೊದಲು ಫೋನು ವಿತರಿಸುವ ಕಾರ್ಯಕ್ಕೆ ಮುಂದಾಗಲಿದೆ. ಕಂಪನಿ ಅಗ್ಗದ ಸ್ಮಾರ್ಟ್ ಫೋನ್ ಬಗ್ಗೆ ರಿಜಿಸ್ಟ್ರೇಷನ್ ಪ್ರಾರಂಭಿಸಿದಾಗ ರಾಜಕೀಯ ಪಕ್ಷಗಳು ಇದನ್ನು ದೇಶದ ಅತಿದೊಡ್ಡ ಹಗರಣ ಎಂದು ಟೀಕಿಸಿದ್ದರು.
Comments are closed.