ಮಾಜಿ ನೀಲಿ ತಾರೆ, ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಭಿನಯಿಸಿರುವ ಹಾಡೊಂದನ್ನು ನಿಷೇಧಿಸಲು ಪಾಕಿಸ್ತಾನ ಸೆನ್ಸಾರ್ ಮಂಡಳಿ ಸಿದ್ಧತೆ ನಡೆಸಿದೆ.
ಶಾರುಖ್ ಖಾನ್ ಅವರ ಮುಂದಿನ ಸಿನಿಮಾ ‘ರಯೀಸ್’ ನಲ್ಲಿ ಸನ್ನಿ ಲಿಯೋನ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು, ಈ ಹಾಡನ್ನು ನಿಷೇಧಿಸಲು ಪಾಕಿಸ್ತಾನ ಸೆನ್ಸಾರ್ ಮಂಡಳಿ ಸಿದ್ಧತೆ ನಡೆಸಿದೆ. ಶಾರುಖ್ ಅಭಿನಯದ ರಯೀಸ್ ಸಿನಿಮಾ 2017 ಕ್ಕೆ ಬಿಡುಗಡೆಯಾಗಲಿದೆ. ಪಾಕಿಸ್ತಾನ ಸನ್ನಿ ಲಿಯೋನ್ ಹಾಡನ್ನು ನಿಷೇಧಿಸುವುದರ ಬಗ್ಗೆ ವರದಿ ಪ್ರಕಟಿಸಿರುವ ಡೈಲಿ ಟೈಮ್ಸ್, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ಬರೆದಿದೆ. ರಯೀಸ್ ಚಿತ್ರದಲ್ಲಿ ಪಾಕಿಸ್ತಾನದ ವಿಜೆಯಾಗಿದ್ದ ಮಹಿರಾ ಖಾನ್, ನಟ ನವಾಜುದ್ದೀನ್ ಸಿದ್ಧಿಖಿ ನಟಿಸಿದ್ದಾರೆ.
Comments are closed.