ರಾಷ್ಟ್ರೀಯ

ಅರೇ … ಈ ಗೂಳಿ ನೀರಿನ ಟ್ಯಾಂಕ್‌ ಹೇಗೆ ಹತ್ತಿತು ?

Pinterest LinkedIn Tumblr

bullಜೈಪುರ : ನಿಮಗೆ ಸೂಪರ್‌ ಹಿಟ್‌ ಶೋಲೆ ಚಿತ್ರದ ವೀರೂ (ಧರ್ಮೇಂದ್ರ )ನೀರಿನ ಟ್ಯಾಂಕ್‌ ಏರಿ ಆತ್ಮಹತ್ಯೆಗೆ ಯತ್ನಿಸುವ ದೃಶ್ಯ ನೆನಪಿರಬಹುದು.ಅಂತಹದ್ದೇ ಒಂದು ಸಾಹಸಕ್ಕೆ ರಾಜಸ್ತಾನದ ಗೂಳಿಯೊಂದು ಕೈಹಾಕಿ ಇದೀಗ ಸುದ್ದಿಯಾಗಿದೆ.

ಚುರು ಎಂಬಲ್ಲಿ ಈ ನಂಬಲಸಾಧ್ಯ ಎನ್ನುವಂತಹ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಗೂಳಿಯೊಂದು ನೂರಾರು ಮೆಟ್ಟಿಲುಗಳಿಂದ ಕೂಡಿರುವ ಬೃಹತ್‌ ನೀರಿನ ಟ್ಯಾಂಕ್‌ನ ತುತ್ತ ತುದಿಯನ್ನು ತಲುಪಿ ಕೆಳ ಬರಲಾರದೆ ಪರದಾಡುತ್ತಿತ್ತು. ಈ ವೇಳೆ ನೂರಾರು ಕುತೂಹಲಿಗಳು ಕೆಳಗೆ ಜಮಾಯಿಸಿದ್ದಾರೆ.

ಕೆಲವರು ಮೇಲೇರಿ ಹರಸಾಹಸ ಪಟ್ಟರೂ ಗೂಳಿಯನ್ನು ಕೆಳಗಿಳಿಸಲು ಸಾಧ್ಯವಾಗಲಿಲ್ಲವಂತೆ. ಕೊನೆಗೆ ಅರವಳಿಕೆ ನೀಡಿ ಗೂಳಿಯ ಪ್ರಜ್ಞೆ ತಪ್ಪಿದ ಬಳಿಕ ಯಂತ್ರದ ಸಹಾಯದ ಮೂಲಕ ಕೆಳಗಿಳಿಸಲಾಗಿದೆ ಎಂದು ವರದಿಯಾಗಿದೆ.

ಕೆಲವರು ಇದು ಫೋಟೋ ಶಾಪ್‌ ಮಾಡಿರುವ ಚಿತ್ರಗಳು ಎಂದು ವಾದಿಸುತ್ತಿದ್ದರೆ ,ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕೆಲವರು ಸಾಮಾಜಿಕ ತಾಣಗಳಲ್ಲಿ ಚಿತ್ರಗಳನ್ನು ಪ್ರಕಟಿಸಿಕೊಂಡಿದ್ದು ಇದೀಗ ವೈರಲ್‌ ಆಗಿವೆ.

ತೀವ್ರವಾಗಿ ಬಾಯಾರಿದ ಗೂಳಿ ನೀರಿಗಾಗಿ ಟಾಂಕಿ ಹತ್ತಿರಬಹುದಾಗಿ ಅಂದಾಜಿಸಲಾಗಿದೆ.
-ಉದಯವಾಣಿ

Comments are closed.