ರಾಷ್ಟ್ರೀಯ

ಇದೊಂದು ರೀತಿಯ ಸಿನೆಮಾ ಕಥೆ ಇದ್ದಂತಿದೆ…ಮೃತಪಟ್ಟ ಯೋಧ 7ವರ್ಷದ ನಂತರ ಮನೆಗೆ ಹಿಂದಿರುಗಿದ …!

Pinterest LinkedIn Tumblr

dehradoon

ಅಲ್ವಾರ್: ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದಿದ್ದ ಯೋಧರೊಬ್ಬರು 7 ವರ್ಷದ ನಂತರ ಮನೆಗೆ ಮರಳಿ ಬಂದ ಸಿನಿಮೀಯ ಘಟನೆ ಡೆಹ್ರಾಡೂನ್ನ ಅಲ್ವಾರ್ನಲ್ಲಿ ನಡೆದಿದೆ.

ಹೌದು. 2009ರಲ್ಲಿ ಡೆಹ್ರಾಡೂನ್ನಲ್ಲಿ ನಾಲ್ಕು ಯೋಧರು ಸಂಚರಿಸುತ್ತಿದ್ದ ಸೇನೆಯ ವಾಹನ ಅಪಘಾತಕ್ಕೀಡಾಗಿತ್ತು. ಅಪಘಾತದ ನಂತರ ಕಾಣೆಯಾಗಿದ್ದ ಯೋಧರಲ್ಲಿ ಮೂವರು ಮನೆಗೆ ಮರಳಿದ್ದರು. ಆದರೆ ಧರಮ್ೕರ್ ಸಿಂಗ್ ಮಾತ್ರ ಬರಲೇ ಇಲ್ಲ. ಕಾಣೆಯಾದ ಮೂರು ವರ್ಷದ ನಂತರ ಧರಮ್ೕರ್ ಮರಣಹೊಂದಿದ್ದಾನೆ ಎಂದು ಸರ್ಕಾರ ಘೊಷಿಸಿ ಆತನ ಕುಟುಂಬಕ್ಕೆ ಪಿಂಚಣಿಯನ್ನೂ ನೀಡುತ್ತಾ ಬಂದಿತ್ತು.

ಇದೀಗ ಧರಮ್ೕರ್ ಸಿಂಗ್ ಅಲ್ವಾರದಲ್ಲಿರುವ ತನ್ನ ಮನೆಗೆ ಬಂದು ಬಾಗಿಲು ತಟ್ಟಿದ್ದಾನೆ.

2009ರ ಘಟನೆಯ ನಂತರ ತನಗೆ ಏನಾಯಿತು ಎಂದು ನೆನಪಾಗ್ತುತಿಲ್ಲ. ಆದರೆ ಕಳೆದ ವಾರ ಹರಿದ್ವಾರದಲ್ಲಿ ಭಿಕ್ಷೆ ಬೇಡುತ್ತಿದ್ದುದು ನೆನಪಿದೆ. ಈ ವೇಳೆ ನನಗೆ ಒಂದು ಬೈಕ್ ಡಿಕ್ಕಿ ಹೊಡೆದಿತ್ತು, ನಂತರ ಬೈಕ್ ಸವಾರ 500 ರೂಪಾಯಿ ನೀಡಿದ್ದ. ಆ ಹಣದಲ್ಲಿ ತಾನು ದೆಹಲಿಗೆ ಬಂದು ನಂತರ ಅಲ್ವಾರದಲ್ಲಿರುವ ನನ್ನ ಮನೆಗೆ ಮರಳಿದ್ದೇನೆ ಎಂದು ಧರಮ್ೕರ್ಸಿಂಗ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇದೀಗ ಧರಮ್ೕರ್ ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.