ರಾಷ್ಟ್ರೀಯ

ಕಣಿವೆ ರಾಜ್ಯದಲ್ಲಿ 75 ವರ್ಷಗಳ ಬಳಿಕ `ದಶಾರ್’ ಕುಂಭ ಮೇಳದ ಸಂಭ್ರಮ

Pinterest LinkedIn Tumblr

kaniveಶ್ರೀನಗರ, ಜೂ.15-ಬರೋಬ್ಬರಿ 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರಿ ಹಿಂದೂಗಳ ಪವಿತ್ರ `ದಶಾರ್’ ಕುಂಭ ಮೇಳ ಪುಣ್ಯಸ್ನಾನ ಆರಂಭವಾಗಿದ್ದು, ಗಂದೇರ್‍ಬಾಲ್‍ನಲ್ಲಿ ಸ್ಥಳೀಯ ಮುಸ್ಲಿಮರ ಸಹಕಾರದಿಂದ ಸಾವಿರಾರು ಹಿಂದೂಗಳು, ವಿಶೇಷವಾಗಿ ಕಾಶ್ಮೀರಿ ಪಂಡಿತರು ಸಂಭ್ರಮದಿಂದ ಉತ್ಸವ ಆಚರಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದ ಗಂದೇರ್‍ಬಾಲ್‍ಗೆ ಈಗಾಗಲೇ ಸಾವಿರಾರು ಕಾಶ್ಮೀರಿ ಪಂಡಿತರು ಆಗಮಿಸಿದ್ದು, ಪವಿತ್ರವಾದ ಝೀಲಂ ಮತ್ತು ಸಿಂಧ್ ನದಿಗಳು ಸೇರುವ ಪುಣ್ಯಸ್ಥಳದಲ್ಲಿ ಈ ವಿಶೇಷ ಕುಂಭ್ ಸ್ನಾನ ನಡೆಯುತ್ತಿದೆ. ವಿಶೇಷವೆಂದರೆ 75 ವರ್ಷಗಳಿಗೆ ಒಂದೇ ಬಾರಿ ಈ ಪವಿತ್ರ ಉತ್ಸವ ನಡೆಯುತ್ತದೆ.

ತಮ್ಮ ಕಾಲದಲ್ಲೇ ಈ ಕುಂಭ ಮೇಳ ನಡೆದಿರುವುದು ಯುವ ಜನತೆಯಲ್ಲಿ ರೋಮಾಂಚನ ಉಂಟು ಮಾಡಿದ್ದು, ತಂಡೋಪತಂಡವಾಗಿ ಯುವಜನ ಧಾವಿಸುತ್ತಿದೆ. ಮುಸ್ಲಿಮರ ಪವಿತ್ರ ಉಪವಾಸದ ಹಬ್ಬ ರಮ್ಜಾನ್‍ನಲ್ಲೇ ಕುಂಬ್ ಮೇಳ ಬಂದಿರುವುದು ಇಡೀ ರಾಜ್ಯದ ಜನತೆಯಲ್ಲಿ ಸಂತಸ ತಂದಿದೆ.
ಪರಿಸ್ಥಿತಿ ಉದ್ವಿಗ್ನ:
ಈ ಮಧ್ಯೆ ಇಲ್ಲಿನ ಪುರಾತನ ಶಂಭುದೇವಸ್ಥಾನ ಪ್ರವೇಶಿಸಿದ್ದ ಮಾನಸಿಕ ಅಸ್ವಸ್ಥನೊಬ್ಬ ದೇವಾಲಯವನ್ನು ಅಪವಿತ್ರಗೊಳಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಾನಸಿಕ ಅಸ್ವಸ್ಥ ಎಂದು ಹೇಳಲಾದ ವ್ಯಕ್ತಿಯನ್ನು ಪೆÇಲೀಸರು ಬಂಧಿಸಿದ್ದಾರೆ.

Comments are closed.