ರಾಷ್ಟ್ರೀಯ

ಕಾನೂನು ಸುವ್ಯವಸ್ಥೆ ಕಾಪಾಡುವುದು ಉ,ಪ್ರದೇಶ ಸರಕಾರದ ಹೊಣೆ: ಹೇಮಾಮಾಲಿನಿ

Pinterest LinkedIn Tumblr

hemaಮಥುರಾ: ನಗರ ಹೊತ್ತಿ ಉರಿಯುತ್ತಿರುವಾಗ ಸಂಸದೆ ಹೇಮಾಮಾಲಿನಿ ಶೂಟಿಂಗ್ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎನ್ನುವ ಆರೋಪಗಳಿಗೆ ತಿರುಗೇಟು ನೀಡಿದ ಸಂಸದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಗುಡುಗಿದ್ದಾರೆ.

ಮಥುರಾ ನಗರದಲ್ಲಿ ಹಿಂಸಾಚಾರ ನಡೆದಿದೆ ಎನ್ನುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಶೂಟಿಂಗ್‌ ಕ್ಯಾನ್ಸಲ್ ಮಾಡಿ ಕೇವಲ 24 ಗಂಟೆಗಳಲ್ಲಿ ನಗರಕ್ಕೆ ಆಗಮಿಸಿದ್ದೇನೆ. ಸಿಎಂ ಅಖಿಲೇಶ್ ಯಾದವ್ ಯಾಕೆ ಇನ್ನು ಘಟನಾ ಸ್ಥಳಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಕಳೆದ 10 ದಿನಗಳಿಂದ ನಾನು ಮಥುರಾದಲ್ಲಿಯೇ ವಾಸವಾಗಿದ್ದೆ. ಘಟನೆ ನಡೆಯುವ ಹಿಂದಿನ ದಿನ ನಾನೂ ಶೂಟಿಂಗ್‌ಗಾಗಿ ತೆರಳಬೇಕಾಗಿ ಬಂತು. ನನಗೆ ಬೇರೆ ಕೆಲಸಗಳು ಇರುತ್ತೇವೆ ಎನ್ನುವುದನ್ನು ಮರೆಯಬೇಡಿ ಎಂದು ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶ ಸರಕಾರದ ವೈಫಲ್ಯದಿಂದಾಗಿ ಇಂತಹ ಹೇಯ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆಗಳು ನಡೆಯುತ್ತಿವೆ. ನಾನು ಸಂಸದೆಯಾಗಿ ಆಯ್ಕೆಯಾಗಿ ಬಂದ ನಂತರ ಜನತೆ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಅಭಿವೃದ್ಧಿ ಕೆಲಸಗಳಲ್ಲಿ ಬಿಜಿಯಾಗಿದ್ದೇನೆ ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.

Comments are closed.