ರಾಷ್ಟ್ರೀಯ

ಕೊಚ್ಚಿ: ಸ್ಪೈಸ್ ಜೆಟ್ ವಿಮಾನ ಶೌಚಾಲಯದಿಂದ ಚಿನ್ನ ವಶ

Pinterest LinkedIn Tumblr

spice-jet-goldನವದೆಹಲಿ: ಸ್ಪೈಸ್ ಜೆಟ್ ವಿಮಾನದ ಶೌಚೌಲಯದಲ್ಲಿ ಒಂದು ಕೆ.ಜಿ ಚಿನ್ನ ಅಡಗಿಸಿಟ್ಟಿದ್ದು, ಅದು ಸಿಬ್ಬಂದಿ ಮುಖ್ಯಸ್ಥರಿಗೆ ಸಿಕ್ಕಿದ ಘಟನೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಚಿನ್ನ ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿದ್ದ ಶಂಕಿತ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಪ್ರಯಾಣಿಕ ವಿಮಾನದ ಪ್ರಯಾಣ ವೇಳೆ ಪದೇ ಪದೇ ಶೌಚಾಲಯಕ್ಕೆ ಹೋಗುವುದು ಕಂಡುಬಂದು ಸಿಬ್ಬಂದಿ ಮುಖ್ಯಸ್ಥ ಶೌಚಾಲಯವನ್ನು ತಪಾಸಣೆ ಮಾಡಿದಾಗ ಚಿನ್ನ ಪತ್ತೆಯಾಗಿದೆ.
ಪ್ರಯಾಣಿಕನನ್ನು ವಿವರವಾಗಿ ತಪಾಸಣೆ ನಡೆಸಿದಾಗ ಪೇಪರಲ್ಲಿ ಚಿನ್ನದ ಬಿಸ್ಕತನ್ನು ಸುತ್ತಿ ಶೌಚಾಲಯದಲ್ಲಿ ಟಿಶ್ಯೂ ಬಾಕ್ಸ್ ಇಡುವ ಜಾಗದ ಹಿಂದೆ ಇಡಲಾಗಿತ್ತು. ದುಬೈ-ಕೊಚ್ಚಿ ಸ್ಪೈಸ್ ಜೆಟ್ ಎಸ್ ಜಿ-18 ವಿಮಾನ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಂಗಿದಾಗ ಪತ್ತೆ ಹಚ್ಚಲಾಯಿತು.
ಸುಂಕ ಅಧಿಕಾರಿಗಳಿಗೆ ವಿಷಯದ ಬಗ್ಗೆ ವರದಿ ಮಾಡಿದ್ದು, ಚಿನ್ನದ ಬಿಸ್ಕತ್ತುಗಳನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.

Comments are closed.