ರಾಷ್ಟ್ರೀಯ

ಆಪಲ್​ನಿಂದ ಹೈದರಾಬಾದ್​ನಲ್ಲಿ ನಕ್ಷೆಗಳ ಅಭಿವೃದ್ದಿ ಕಚೇರಿ ಸ್ಥಾಪನೆ

Pinterest LinkedIn Tumblr

apple-storeಹೈದರಾಬಾದ್: ಪ್ರಪಂಚದ ಸ್ಮಾರ್ಟ್ಫೋನ್ ದಿಗ್ಗಜ ಆಪಲ್ ಹೈದರಾಬಾದ್ನಲ್ಲಿ ತನ್ನ ನಕ್ಷೆಗಳ ಅಭಿವೃದ್ದಿ ಕಚೇರಿ ಆರಂಭಿಸಲು ಹಸಿರು ನಿಶಾನೆ ತೋರಿದೆ. ಇದರಿಂದ ಸುಮಾರು 4 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಕಂಪನಿ ಮೂಲಗಳು ತಿಳಿಸಿವೆ.

‘ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಮ್ಮ ಮುಖ್ಯ ಉದ್ದೇಶಕ್ಕೆ ಹೈದರಾಬಾದ್ನಲ್ಲಿ ನಕ್ಷೆ ಅಭಿವೃದ್ದಿ ಕೇಂದ್ರ ಸ್ಥಾಪನೆ ಮಾಡುತ್ತಿರುವುದು ನನಗೆ ಹೆಮ್ಮೆ ಅನಿಸುತ್ತಿದೆ’ ಎಂದು ಆಪಲ್ ಕಂಪನಿ ಸಿಇಓ ಟಿಮ್ ಕುಕ್ ಹೇಳಿದ್ದಾರೆ. ಭಾರತದ ಪ್ರತಿಭೆಗಳನ್ನು ಗುರುತಿಸಲು ಮತ್ತು ಭಾರತದೊಂದಿಗಿನ ಬಾಂಧವ್ಯ ಗಟ್ಟಿಗೊಳಿಸಲು ಈ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ.

ಆಪಲ್ನ ನಕಾಶೆ ವಿನ್ಯಾಸ ಕೇಂದ್ರಕ್ಕೆ ಹೈದರಾಬಾದ್ನ್ನು ಗುರುತಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಇದರಿಂದ ರಾಜ್ಯದಲ್ಲಿ ಉದ್ಯೋಗವಕಾಶಗಳು ಹೆಚ್ಚಲಿವೆ, ಕಂಪನಿಗೆ ಅಗತ್ಯವಿರುವ ಎಲ್ಲಾ ಅನುಕೂಲತೆಯನ್ನು ಮಾಡಿಕೊಡಲಾಗುವುದು ಎಂದರು. ಬುಧವಾರದಂದು ಬೆಂಗಳೂರಿನಲ್ಲಿ ಐಓಎಸ್ ಅಭಿವೃದ್ದಿ ಕಚೇರಿ ಸ್ಥಾಪಿಸಲಾಗುವುದು ಎಂದು ಘೊಷಿಸಿತ್ತು.

Comments are closed.