ರಾಷ್ಟ್ರೀಯ

ಗುಜರಾತ್ ಸಿಎಂ ಆನಂದಿಬೇನ್ ಪಟೇಲ್ ಬದಲಾವಣೆ, ನಿತಿನ್ ಭಾಯಿ ನೂತನ ಸಿಎಂ?

Pinterest LinkedIn Tumblr

anandiben-patel

ನವದೆಹಲಿ: 2017ರ ಗುಜರಾತ್ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಮುಖ್ಯಮಂತ್ರಿ ಅನಂದಿಬೇನ್ ಪಟೇಲ್ ಅವರನ್ನು ಬದಲಾವಣೆ ಮಾಡಿ, ಆ ಸ್ಥಾನಕ್ಕೆ ಆರೋಗ್ಯ ಸಚಿವ ನಿತಿನ್ ಭಾಯಿ ಪಟೇಲ್ ಅವರನ್ನು ತರಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರ ತರಲು ರಣತಂತ್ರ ರೂಪಿಸುತ್ತಿದ್ದು, ಸಿಎಂ ಬದಲಾವಣೆ ಅದರ ಒಂದು ಭಾಗ ಎನ್ನಲಾಗಿದೆ.

ಅನಂದಿಬೇನ್ ಪಟೇಲ್ ಅವರನ್ನು ರಾಜಸ್ಥಾನ ರಾಜ್ಯಪಾಲರನ್ನಾಗಿ ನೇಮಕ ಮಾಡಿ, ಅವರ ಸ್ಥಾನಕ್ಕೆ ಆರೋಗ್ಯ ಹಾಗೂ ಇತರೆ ಪ್ರಮುಖ ಖಾತೆಗಳನ್ನು ಹೊಂದಿರುವ ನಿತಿನ್ ಭಾಯಿ ಪಟೇಲ್ ಅವರನ್ನು ತರಲಾಗುತ್ತಿದೆ.

ಸರ್ಕಾರ ಮತ್ತು ಪಕ್ಷದ ನಡುವಿನ ಸಹಕಾರ ಹಾಗೂ ಸಮನ್ವಯತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಮತ್ತು ಪಕ್ಷದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅನಂದಿಬೇನ್ ಪಟೇಲ್ ಅವರು ಎರಡು ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಮೀಸಲಾತಿಗಾಗಿ ರಾಜ್ಯದಲ್ಲಿ ನಡೆದ ಪಟಿದಾರ್ ಹಾಗೂ ಪಟೇಲ್ ಚಳುವಳಿ ನಿಯಂತ್ರಿಸುವಲ್ಲಿ ವಿಫಲವಾಗಿದ್ದರು.

Write A Comment