ರಾಷ್ಟ್ರೀಯ

ಮಹಡಿಯಿಂದ ಜಿಗಿದು ಬ್ರಿಟಾನಿಕಾ ಅಧಿಕಾರಿ ಆತ್ಮಹತ್ಯೆ

Pinterest LinkedIn Tumblr

vineet

ಗುರ್ಗಾಂವ್: ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಎಕ್ಸಿಕ್ಯೂಟಿವ್ ವಿನೀತ್ ವ್ಹಿಗ್ ಅವರು ಸೋಮವಾರ ತಾವು ವಾಸವಿದ್ದ ಅಪಾರ್ಟ್ವೆುಂಟಿನ 19ನೇ ಮಹಡಿಯಿಂದ ವೆಂಟಿಲೇಶನ್ ಶಾಫ್ಟ್ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ರಿಟಾನಿಕಾದಲ್ಲಿ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದ 47ರ ಹರೆಯದ ವಿನೀತ್ ಅವರ ಶವ ಸುರಂಗದಲ್ಲಿ ಪತ್ತೆಯಾಗಿದ್ದು, ಕಿಸೆಯಲ್ಲಿ ಡೆತ್ ನೋಟ್ ದೊಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಳಿ ಬೆಳಕಿನ ಸಲುವಾಗಿ ಅಪಾರ್ಟ್ಮೆಂಟಿನಲ್ಲಿ ಇರಿಸಲಾಗಿದ್ದ ಆಳವಾದ ಸುರಂಗಕ್ಕೆ ಜಿಗಿದರೇ ಅಥವಾ ಇಲೆವೇಟರ್ ಸುರಂಗಕ್ಕೆ ಜಿಗಿದರೇ ಎಂಬ ಬಗ್ಗೆ ಗೊಂದಲವಿದೆ ಎಂದು ವರದಿಗಳು ಹೇಳಿವೆ.

ವಿನೀತ್ ಅವರು ಈ ಮೊದಲು ವಿಪ್ರೊ ಕಂಪೆನಿಯಲ್ಲಿ ಕೆಲಸ ಮಾಡಿದ್ದರು ಎಂಬುವುದಾಗಿ ಮೂಲಗಳು ತಿಳಿಸಿವೆ.

Write A Comment