ರಾಷ್ಟ್ರೀಯ

ಮಹಾತ್ಮ ಗಾಂಧೀಜಿ ಮೊಮ್ಮಗನಿಗೆ ನೆರವಿನ ಹಸ್ತ ಚಾಚಿದ ಮೋದಿ

Pinterest LinkedIn Tumblr

modi--gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವೃದ್ಧಾಶ್ರಮದಲ್ಲಿ ಹೆಂಡತಿಯೊಂದಿಗೆ ವಾಸವಿರುವ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಕಾನುಭಾಯ್ ಗಾಂಧಿ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದು ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಮೋದಿ ಅವರ ಆದೇಶದಂತೆ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ದೆಹಲಿಯ ಗೌತಮ್‍ಪುರಿಯಲ್ಲಿರುವ ಗುರು ವಿಶ್ರಾಮ್ ವೃದ್ಧಾಶ್ರಮದಲ್ಲಿ ಕಾನುಭಾಯ್ ಗಾಂಧಿ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷ ಅವರೊಂದಿಗೆ ಕಾಲಕಳೆದರು.

ಭಾನುವಾರ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಂದೀಪ್ ಕುಮಾರ್ ಕೂಡ ಕಾನುಭಾಯ್ ಗಾಂಧಿ ಅವರನ್ನು ಭೇಟಿಯಾದರು.

ಮಹಾತ್ಮ ಗಾಂಧಿ ಅವರ ಮೂರನೇ ಮಗ ರಾಮ್‍ದಾಸ್ ಅವರ ಜೇಷ್ಠ ಪುತ್ರರಾದ 87 ವರ್ಷ ವಯಸ್ಸಿನ ಕಾನುಭಾಯ್ ಗಾಂಧಿ 4 ದಶಕಗಳ ಕಾಲ ಅಮೆರಿಕದಲ್ಲಿ ವಾಸವಿದ್ದು 2014ರಲ್ಲಿ ಪತ್ನಿ ಶಿವ ಲಕ್ಷ್ಮಿ ಗಾಂಧಿ(85) ಅವರೊಂದಿಗೆ ಭಾರತಕ್ಕೆ ಬಂದರು. ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ವಿವಿಧ ಆಶ್ರಮಗಳಲ್ಲಿದ್ದ ಈ ಇಬ್ಬರು ಮೇ 8 ರಂದು ದೆಹಲಿಯ ಗುರು ವಿಶ್ರಾಮ್ ವೃದ್ಧಾಶ್ರವನ್ನು ಸೇರಿದ್ದಾರೆ.

ಈ ವೃದ್ಧ ದಂಪತಿಗೆ ಎಲ್ಲಾ ರೀತಿಯ ನೆರವು ಒದಗಿಸುವುದಾಗಿ ಮೋದಿ ಹೇಳಿದ್ದಾರೆ.

Write A Comment