ರಾಷ್ಟ್ರೀಯ

ಮಾನನಷ್ಟ ಕ್ರಿಮಿನಲ್: ಸುಪ್ರೀಂ

Pinterest LinkedIn Tumblr

SupremeCourtನವದೆಹಲಿ(ಪಿಟಿಐ): ಮಾನನಷ್ಟ ಮೊಕದ್ದಮೆ ಸಿವಿಲ್‌ ಅಲ್ಲ. ಅದು, ಕ್ರಿಮಿನಲ್ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಐಪಿಸಿ ಸೆಕ್ಷನ್ 499 ಮತ್ತು 500 ಸಂವಿಧಾನ ಬದ್ಧ ಎಂದು ಹೇಳಿರುವ ಕೋರ್ಟ್‌, ‘ಮಾನನಷ್ಟ ಪ್ರಕರಣವನ್ನು ಸಿವಿಲ್ ದೂರು ಎಂದು ಪರಿಗಣಿಸುವಂತೆ’ ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಸಂವಿಧಾನದ ಪ್ರಕಾರ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಕ್ರಿಮಿನಲ್ ದೂರು ಎಂದು ಪರಿಗಣಿಸಿದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ, ಐಪಿಸಿ ಸೆಕ್ಷನ್ 499ನ್ನು ಮಾನನಷ್ಟ ಅಲ್ಲ, ಸಿವಿಲ್ ದೂರು ಎಂದು ಪರಿಗಣಿಸುವಂತೆ ರಾಹುಲ್ ಗಾಂಧಿ, ಸುಬ್ರಮಣಿಯನ್ ಹಾಗೂ ಕೇಜ್ರಿವಾಲ್ ಹಾಗೂ ಇತರರು ಸುಪ್ರೀಂನಲ್ಲಿ ವಾದ ಮಂಡಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಐಪಿಸಿ ಸೆಕ್ಷನ್ 499 ರದ್ದುಗೊಳಿಸಲು ನಿರಾಕರಿಸಿತು. ಭಾರತೀಯ ದಂಡ ಸಂಹಿತೆ ಕಲಂ 499 ಮತ್ತು 500 ಅನ್ನು ಮಾನನಷ್ಟ ಮೊಕದ್ದಮೆ ಎಂದು ಪರಿಗಣಿಸಲಾಗುವುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೇಳಿಕೆ ಅಡಿ ಮತ್ತೊಬ್ಬ ವ್ಯಕ್ತಿಯ ಹಕ್ಕು ಮತ್ತು ಗೌರವ ಪರಿಗಣಿಸುವ ನಿಟ್ಟಿನಲ್ಲಿ ಎರಡೂ ಕಲಂ ಅಗತ್ಯ ಎಂದು ಸ್ಪಷ್ಟಪಡಿಸಿತು.

ಐಪಿಸಿ ಸೆಕ್ಷನ್ 500ರ ಅಡಿ ಮಾನನಷ್ಟ ಪ್ರಕರಣ ಸಂಬಂಧ ಎರಡು ವರ್ಷ ಜೈಲು ಅಥವಾ ದಂಡ ವಿಧಿಸಬಹುದು ಅಥವಾ ಎರಡನ್ನೂ ವಿಧಿಸಬಹುದು.

Write A Comment