ರಾಷ್ಟ್ರೀಯ

ಶಾಲಾ ಮಕ್ಕಳನ್ನು ತಂಪಾಗಿಡಲು ಈ ಐಡಿಯ ಹೇಗಿದೆ….?

Pinterest LinkedIn Tumblr

school-bus

ಜೈಪುರ್: ಬೇಸಿಗೆ ರಜೆ ಕಳೆದು ಈಗಾಗಲೇ ಹಲವೆಡೆ ಶಾಲೆ ಆರಂಭವಾಗಿದೆ. ಹೀಗಾಗಿ ಮಕ್ಕಳು ಸುಡೋ ಬಿಸಿಲಲ್ಲಿ ಶಾಲೆಗೆ ಹೋಗುವಾಗ ಕಿರಿಕಿರಿ ಅನುಭವಿಸ್ತಾರೆ. ಆದರೆ ಮಕ್ಕಳನ್ನ ಬಿಸಿಲಿನಲ್ಲೂ ತಂಪಾಗಿಡೋಕೆ ರಾಜಸ್ಥಾನದಲ್ಲಿ ಸಖತ್ ಪ್ಲಾನ್ ಮಾಡಲಾಗಿದೆ.

ರಾಜಸ್ಥಾನದ ಜೋದ್‍ಪುರ್‍ನಲ್ಲಿರುವ ಥಾರ್ ಶಾಲೆಯಲ್ಲಿ ಮಕ್ಕಳನ್ನ ಬಿಸಿಲಿನಿಂದ ರಕ್ಷಿಸೋಕೆ ಒಂದೊಳ್ಳೆ ಐಡಿಯಾ ಮಾಡಿದ್ದಾರೆ. ಶಾಲಾ ವಾಹನದ ತಾರಸಿಯ ಮೇಲೆ ಹುಲ್ಲಿನ ಹೊದಿಕೆ ಹಾಕಿ ನ್ಯಾಚುರಲ್ ಎಸಿ ನಿರ್ಮಿಸಿದ್ದಾರೆ. ಇದಕ್ಕೆ ಆಗಾಗ ನೀರು ಹಾಕುತ್ತಾ ತೇವವಾಗಿರುವಂತೆ ನೋಡಿಕೊಳ್ಳಲಾಗುತ್ತೆ. ಹೀಗಾಗಿ ಬಸ್ ಹೀಟ್ ಆಗೋದಿಲ್ಲ. ಅಲ್ಲದೆ ಬಸ್ ಚಲಿಸುವಾಗ ಎಸಿಯಂತ ತಣ್ಣನೆ ಗಾಳಿ ಬೀಸಿ ಮಕ್ಕಳು ಮತ್ತ ಶಿಕ್ಷಕರನ್ನ ಕೂಲ್ ಆಗಿ ಇಡುತ್ತದೆ.

ಯಾವುದೇ ಖರ್ಚಿಲ್ಲದೆ ಮಕ್ಕಳಿಗಾಗಿ ನ್ಯಾಚುರಲ್ ಎಸಿ ಬಸ್ ನಿರ್ಮಿಸಿದ್ದೇವೆ ಅಂತಾರೆ ಶಾಲೆಯ ಆಡಳಿತ ಸಿಬ್ಬಂದಿ.

Write A Comment