ರಾಷ್ಟ್ರೀಯ

ಪುತ್ರನ ಬಂಧನ ನಂತರ ಜೆಡಿಯು ಶಾಸಕಿ ದೇವಿ ವಿರುದ್ಧ ಅರೆಸ್ಟ್‌ ವಾರೆಂಟ್‌

Pinterest LinkedIn Tumblr

manorama-devi-bihar

ಬಿಹಾರ: ಕಾರನ್ನು ಓವರ್ ಟೇಕ್ ಮಾಡಿದ ಎಂಬ ಕಾರಣಕ್ಕೆ 19ರ ಹರೆಯದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಸಂಬಂಧ ಜೆಡಿಯು ಶಾಸಕಿ ಮನೋರಮಾ ದೇವಿ ಪುತ್ರ ರಾಕಿ ಬಂಧನದ ನಂತರ ಇದೀಗ ಮನೋರಮಾ ದೇವಿ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದ್ದು, ಆಕೆ ತಲೆ ಮರೆಸಿಕೊಂಡಿದ್ದಾರೆ.

ಬಿಹಾರದಲ್ಲಿ ಮದ್ಯ ನಿಷೇಧ ಆದೇಶ ನಂತರವು ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಆರೋಪದ ಮೇಲೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಪಕ್ಷದ ಜೆಡಿಯು ಶಾಸಕಿ ಮನೋರಮಾ ದೇವಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.

ಇನ್ನು ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಮಗನಿಗೆ ರಕ್ಷಣೆ ನೀಡಿದರೆಂಬ ಕಾರಣಕ್ಕೆ ಜೆಡಿಯು ಮನೋರಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.

ಆರೋಪಿ ರಾಕಿ ಯಾದವ್ ಗಾಗಿ ಪಟ್ನಾದಿಂದ ನೂರು ಕಿ.ಮೀ.ದೂರದಲ್ಲಿರುವ ಗಯಾ ಜಿಲ್ಲೆಯಲ್ಲಿನ ಮನೋರಮಾ ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಹಲವಾರು ದೇಶೀ ನಿರ್ಮಿತ ಫಾರೀನ್‌ ಲಿಕ್ಕರ್‌ ಬಾಟಲುಗಳು ಸಿಕ್ಕಿದ್ದವು.

Write A Comment