ರಾಷ್ಟ್ರೀಯ

8 ವರ್ಷಗಳ ಬಳಿಕ ಮೊದಲ ಬಾರಿಗೆ ಐಪಿಎಲ್‌ಗೆ ಸುರೇಶ್ ರೈನಾ ಚಕ್ಕರ್!

Pinterest LinkedIn Tumblr

raina

ಅಹಮದಾಬಾದ್: ಕಳೆದ 8 ವರ್ಷಗಳಿಂದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಆಡುತ್ತಾ ಪ್ರಸ್ತುತ ಗುಜರಾತ್ ಲಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿತ್ತಿರುವ ನಾಯಕ ಸುರೇಶ್ ರೈನಾ ಇದೇ ಮೊದಲ ಬಾರಿಗೆ ಐಪಿಎಲ್ ಬಿಟ್ಟು ಹಾಲೆಂಡ್ ಗೆ ತೆರಳಿದ್ದಾರೆ.

ಕಳೆದ ವರ್ಷ ಸುರೇಶ್ ರೈನಾ ಪ್ರಿಯಾಂಕರನ್ನು ಮದುವೆಯಾಗಿದ್ದರು. ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ತುಂಬು ಗರ್ಭಿಣಿ ಪತ್ನಿ ಪ್ರಿಯಾಂಕಾರ ಜತೆಗಿರಲು ರೈನಾ ಹಾಲೆಂಡ್ ಗೆ ತೆರಳಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿತ್ತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈನಾ, ನಾಳೆ ನನ್ನ ಪತ್ನಿಯನ್ನು ನೋಡಲು ಹಾಲೆಂಡ್ ಗೆ ತೆರಳುತ್ತಿದ್ದೇನೆ. ನಾನೀಗ ತುಂಬಾ ಸಂತೋಷವಾಗಿದ್ದೇನೆ ಎಂದಿದ್ದರು.

ಐಪಿಎಲ್ 7 ಆವೃತ್ತಿಗಳಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ ಆಡಿದ್ದರು. ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಚೆನ್ನೈ ತಂಡಕ್ಕೆ ಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಇದರಿಂದಾಗಿ ಹೊಸ ತಂಡವಾದ ಗುಜರಾತ್ ಲಯನ್ಸ್ ಸುರೇಶ್ ರೈನಾ ಪರವಾಗಿ ಬಿಡ್ ಮಾಡಿ ತಮ್ಮ ತಂಡದ ನಾಯಕನಾಗಿ ಆಯ್ಕೆ ಮಾಡಿತ್ತು.

ಐಪಿಎಲ್ ನಲ್ಲಿ ಸತತ 143 ಪಂದ್ಯಗಳನ್ನು ಆಡಿರುವ ಸುರೇಶ್ ರೈನಾ 33.48ರ ಸರಾಸರಿಯಲ್ಲಿ 3985 ರನ್ ಗಳನ್ನು ಸಿಡಿಸಿದ್ದಾರೆ.

ಸುರೇಶ್ ರೈನಾರ ಅನುಪಸ್ಥಿತಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 14ರಂದು ನಡೆಯಲಿರುವ ಆರ್ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದ ಸಾರಥ್ಯವನ್ನು ಬ್ರೆಂಡಮ್ ಮೆಕ್ಕಲಮ್ ಅಥವಾ ಅರೋನ್ ಫಿಂಚ್ ವಹಿಸುವ ಸಾಧ್ಯತೆ ಇವೆ.

Write A Comment