ರಾಷ್ಟ್ರೀಯ

ಮೇಘಾಲಯ, ಈಶಾನ್ಯ ರಾಜ್ಯಗಳಲ್ಲಿ ಲಘು ಭೂಕಂಪ

Pinterest LinkedIn Tumblr

earth-quake-webಷಿಲ್ಲಾಂಗ್: ಮೇಘಾಲಯ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಬಾಂಗ್ಲಾದೇಶದಲ್ಲಿ ಶನಿವಾರ ಮಧ್ಯಾಹ್ನ ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಸಾವು, ನೋವು ಅಥವಾ ಆಸ್ತಿಪಾಸ್ತಿ ಹಾನಿಯ ವರದಿ ಬಂದಿಲ್ಲ.

ಮಧ್ಯಾಹ್ನ 3.13ರ ವೇಳೆಗೆ ಭೂಕಂಪ ಸಂಭವಿಸಿದ್ದು ಮೇಘಾಲಯದ ಪೂರ್ವ ಖಾಸಿ ಗುಡ್ಡಗಾಡು ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಪ್ರಾದೇಶಿಕ ಭೂಕಂಪನ ಕೇಂದ್ರದ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದ್ದಾರೆ.

ಈಶಾನ್ಯದ ಅಸ್ಸಾಂ, ಮೇಘಾಲಯ, ಮಿಜೋರಂ, ತ್ರಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರ ಈ 7 ರಾಜ್ಯಗಳು ಜಗತ್ತಿನಲ್ಲಿ ಅತಿ ಹೆಚ್ಚು ಭೂಕಂಪಕ್ಕೆ ಒಳಗಾಗುವ 6 ವಲಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.

Write A Comment