ರಾಷ್ಟ್ರೀಯ

ಅಗಸ್ಟ ಪ್ರಕರಣ; ಸ್ವಾಮಿಯಿಂದ ಹೊಸ ಬಾಂಬ್

Pinterest LinkedIn Tumblr

Subramanian-Swamy-e1456128502619ದೆಹಲಿ: ಅಗಸ್ಟ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಪೈಡ್ ಸುದ್ದಿಯ ಪತ್ರಕರ್ತನನ್ನು ಪ್ರಶ್ನಿಸಲಾಗುತ್ತಿದೆ ಎಂಬ ವಿಷಯವನ್ನು ಬಹಿರಂಗಪಡಿಸಿ ಎಂಬುವುದಾಗಿ ರಾಜ್ಯಸಭೆಗೆ ಹೊಸದಾಗಿ ನೇಮಕಗೊಂಡಿರುವ ಸುಬ್ರಮಣಿಯನ್‌ ಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಇದೇ ವೇಳೆ ಜಾರಿ ನಿರ್ದೇಶನಾಲಯವು ರಾಫೇಲ್‌ ವ್ಯವಹಾರಕ್ಕೆ ಸಂಬಂಧಿಸಿ ಐದು ಕೋಟಿ ರು. ಹಣ ಪಡೆದಿರುವ ಇನ್ನೊಬ್ಬ ಪತ್ರಕರ್ತನಿಗಾಗಿ ಶೋಧ ನಡೆಸುತ್ತಿದೆ ಎಂದು ಸ್ವಾಮಿ ಹೇಳಿದ್ದಾರೆ.

ಅಗಸ್ಟಾ ಹಗರಣಕ್ಕೆ ಸಂಬಂಧಪಟ್ಟು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರೀ ವಾಗ್ಯುದ್ಧ, ಗಲಭೆ, ಗದ್ದಲ ನಡೆಯುತ್ತಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣಕ್ಕೆ ಸಂಬಂಧಪಟ್ಟು ಇಟಲಿಯ ಮಿಲಾನ್‌ ನಲ್ಲಿನ ಕೋರ್ಟ್‌, ಆಗಸ್ಟಾ ಮಾಜಿ ಮುಖ್ಯಸ್ಥ ಬ್ರೂನೋ ಸ್ಪಾಗ್ನೊಲಿನಿ ಅವರನ್ನು ಸುಳ್ಳು ಲೆಕ್ಕಪತ್ರ ಇಟ್ಟಿರುವುದಕ್ಕೆ ಮತ್ತು ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳ ಮಾರಾಟದಲ್ಲಿ ಭ್ರಷ್ಟಾಚಾರ ಎಸಗಿರುವುದಕ್ಕೆ ಜೈಲಿಗೆ ಅಟ್ಟಿರುವ ಬೆನ್ನಲ್ಲಿ ಭಾರತದ ರಾಜಕೀಯ ರಂಗದಲ್ಲಿ ಭಾರೀ ಕೋಲಾಹಲ ಏರ್ಪಟ್ಟಿದೆ.

Write A Comment