ಅಂತರಾಷ್ಟ್ರೀಯ

ಲಂಡನ್ ನಲ್ಲಿ ಮೊದಲ ಮುಸ್ಲಿಂ ಮೇಯರ್ ಆಯ್ಕೆ ಸಾಧ್ಯತೆ; ಮೋದಿ ಹೆಸರಿನಲ್ಲಿ ಮತ ಯಾಚಿಸಿದ ವಿರೋಧಿ

Pinterest LinkedIn Tumblr

sadiq-story

ಲಂಡನ್: ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಲಂಡನ್ ನ ನೂತನ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅವರ ಕನ್ಸರ್ವೇಟಿವ್ ವಿರೋಧಿ ಅಭ್ಯರ್ಥಿ ಜಾಕ್ ಗೋಲ್ಡ್ ಸ್ಮಿತ್ ಹಿಂದುಗಳು ಮತ್ತು ಸಿಖ್ಖರ ಮತಗಳನ್ನು ಸೆಳೆಯಲು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಬಳಸಿದ್ದಾರೆ.

ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್ ನಲ್ಲಿ ಮೇಯರ್ ಗಳನ್ನು ಆಯ್ಕೆ ಮಾಡಲು ಗುರುವಾರ ಮತದಾನ ನಡೆಯಲಿದ್ದು, ಲಂಡನ್ ಮೇಯರ್ ಸ್ಥಾನ ಪ್ರತಿಷ್ಟಿತ ಸ್ಪರ್ಧೆಯಾಗಿದೆ.

ಈಗಿನ ಸೂಚನೆಗಳಂತೆ ೨೦೦೫ ರಿಂದ ಲೇಬರ್ ಪಕ್ಷದ ಸಂಸದ ಮತ್ತು ಮಾನವ ಹಕ್ಕುಗಳ ವಕೀಲ ೪೫ ವರ್ಷದ ಖಾನ್ ಗೆಲ್ಲುವ ಅಭ್ಯರ್ಥಿ ಎಂದೆ ಬಿಂಬಿದಲಾಗಿದೆ. ಇದು ಸಾಧ್ಯವಾದರೆ ಮಾಜಿ ಬಸ್ ಚಾಲಕನ ಮಗ, ಯುರೋಪಿನ ಶಕ್ತಿಯುತ ಮುಸ್ಲಿಂ ರಾಜಕಾರಣಿಯಾಗಲಿದ್ದಾರೆ.

೨೦೦೯-೧೦ ರ ಅವಧಿಯಲ್ಲಿ ಪ್ರಧಾನಿ ಗಾರ್ಡನ್ ಬ್ರೌನ್ ಸರ್ಕಾರದ ಸಂಪುಟದಲ್ಲಿ ಖಾನ್ ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದರು. ಸಂಪುಟ ಸಭೆಗಳಲ್ಲಿ ಭಾಗವಹಿಸಿದ ಮೊದಲ ಮುಸ್ಲಿಂ ಸಚಿವಾರಾಗಿದ್ದರು ಖಾನ್.

“ನಾನು ಲಂಡನ್ನಿನನವನು, ಯೂರೋಪಿಯನ್, ಬ್ರಿಟಿಶ್, ಇಂಗ್ಲಿಶ್ ಮತ್ತು ಏಶ್ಯಾ ಮತ್ತು ಪಾಕಿಸ್ತಾನ ಮೂಲದ ಇಸ್ಲಾಮಿಕ್ ಧರ್ಮೀಯ, ಇಬ್ಬರೂ ಮಕ್ಕಳ ತಂದೆ ಮತ್ತು ಪತಿ ” ಎಂದು ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

೧೯೪೭ ರಲ್ಲಿ ಭಾರತ ವಿಭಜನೆಯಾದಾಗ ಖಾನ್ ಅವರ ತಾತ ಪಾಕಿಸ್ತಾನಕ್ಕೆ ಹೋಗಿದ್ದರು ಮತ್ತು ಖಾನ್ ಪೋಷಕರು ೧೯೭೦ರಲ್ಲಿ ಬ್ರಿಟನ್ ಗೆ ವಲಸಿಗರಾಗಿ ಬಂದಿದ್ದರು. ಹೊಸ ಮೇಯರ್ ಸದ್ಯದ ಕನ್ಸರ್ವೇಟಿವ್ ಮೇಯರ್ ಬೋರಿಸ್ ಜಾನ್ಸನ್ ಅವರನ್ನು ಬದಲಿಸಲಿದ್ದಾರೆ.

ಮೇಯರ್ ಸ್ಪರ್ಧೆ ನೈತಿಕ ಅಧಃಪತನಕ್ಕೆ ಇಳಿದಿದೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ದೂರಿವೆ. ಗೋಲ್ಡ್ ಸ್ಮಿತ್ ಗೆಲ್ಲಲು ಸಹಕರಿಸಲು ಕನ್ಸರ್ವೆಟಿವ್ ಪಕ್ಷದವರು ಜನಾಂಗೀಯ ಉದ್ವಿಘ್ನತೆಯ ಮೊರೆ ಹೋಗಿದ್ದಾರೆ ಎಂದು ಅವರು ದೂರಿದ್ದಾರೆ.

ಹಿಂದೂ ಮತ್ತು ಸಿಖ್ ಮತದಾರರನ್ನು ಸೆಳೆಯಲು ಗೋಲ್ಡ್ ಸ್ಮಿತ್ ಮೋದಿಯನ್ನು ಭೇಟಿಯಾಗಿದ್ದರು ಆದರೆ ಖಾನ್ ಭೇಟಿ ಮಾಡಿಲ್ಲ ಎಂಬ ಕರಪತ್ರವನ್ನು ಕೂಡ ಹಂಚಲಾಗಿದೆ.

Write A Comment