ರಾಷ್ಟ್ರೀಯ

ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡನ ಸ್ಥಿತಿ ಸ್ಥಿರ: ವೈದ್ಯ

Pinterest LinkedIn Tumblr

jnuನವದೆಹಲಿ: ಉಪವಾಸ ಸತ್ಯಾಗ್ರಹದಿಂದ ಆರೋಗ್ಯದಲ್ಲಿ ಅಸ್ಥಿರತೆ ಕಂಡು ಆಸ್ಪತ್ರೆಗೆ ದಾಖಲಾಗಿದ್ದ ಜವಾಹರ್ ಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮುಖಂಡ ಸೌರಭ್ ಶರ್ಮಾ ಅವರು ಈಗ ಸ್ಥಿರವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.
“ಈಗ ಸೌರಭ್ ಶರ್ಮಾ ಅವರ ಸ್ಥಿತಿ ಸ್ಥಿರವಾಗಿದೆ. ಅವರ ರಕ್ತದಲ್ಲಿ ಸಕ್ಕರೆ ಅಂಶ ಇಳಿದಿತ್ತು ಆದರೆ ಈಗ ಸಾಧಾರಣ ಸ್ಥಿತಿಗೆ ಮರಳಿದೆ. ಅವರನ್ನು ವೈದ್ಯರು ಪರಿಶೀಲನೆಯಲ್ಲಿಟ್ಟಿದ್ದು, ಆತಂಕ ಪಡುವ ಅಗತ್ಯವಿಲ್ಲ” ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಉಪವಾಸ ಸತ್ಯಾಗ್ರಹದಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡಿದ್ದರಿಂದ ಜೆ ಎನ್ ಎಸ್ ಸಿ ಯು ಪ್ರಧಾನ ಕಾರ್ಯದರ್ಶಿ ಶರ್ಮಾ ಅವರನ್ನು ಸೋಮವಾರ ಮಧ್ಯಾಹ್ನ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಫೆಬ್ರವರಿ ೯ ರ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ್ದರಿಂದ ವಿಶ್ವವಿದ್ಯಾಲಯದ ಉನ್ನತ ಸಮಿತಿ ಶರ್ಮಾ ಅವರಿಗೆ ೧೦೦೦೦ ರೂ ದಂಡ ಹಾಕಿತ್ತು. ಇದನ್ನು ವಿರೋಧಿಸಿ ಅವರು ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಸದಸ್ಯರು ಅನಿರ್ಧಿಷ್ಟ ಕಾಲಾವಧಿಯವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಫೆಬ್ರವರಿ ೯ ರ ಘಟನೆಯಿಂದಾಗಿ ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿರುವುದನ್ನು ವಿರೋಧಿಸಿ ಜೆ ಎನ್ ಎಸ್ ಸಿ ಯು ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿದಂತೆ ಇತರ ಜೆ ಎನ್ ಎಸ್ ಸಿ ಯು ಸದಸ್ಯರು ಹಾಗೂ ಎ ಬಿ ವಿ ಪಿ ಸದಸ್ಯರು ಕೂಡ ಉಪವಾಸ ಪ್ರತಿಭಟನೆ ನಡೆಸಿದ್ದಾರೆ.

Write A Comment