ರಾಷ್ಟ್ರೀಯ

ಗಂಜಾಮ್ ನಲ್ಲಿ ಸಿಡಿಲು ಬಡಿದು 6 ಮಂದಿ ಸಾವು

Pinterest LinkedIn Tumblr

lightingಬೆರ್ಹಾಪುರ: ಒಡಿಶಾದ ಗಂಜಾಮ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಸಿಡಿಲು ಬಡಿದು ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ಬುಲಾ ಸೇತಿ(38), ರಾಜು ದಾಸ್(50), ರಾಮ ನಾಯಕ್(56), ಸುರೇಶ್ ರೌತ್(13), ಸುರೇಂದ್ರ ಸೇತಿ(42) ಹಾಗೂ ಸುಭೋದಾ ಕೈಕೆ(35) ಎಂದು ಗುರುತಿಸಲಾಗಿದೆ.
ಸಿಡಿಲಿನಿಂದಾಗಿ ಒಂದು ಅಸು ಹಾಗೂ 28 ಮೇಕೆಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment