ರಾಷ್ಟ್ರೀಯ

ಪಾಕಿಸ್ತಾನದಿಂದಲೂ ಕಾಣಲಿದೆ ಭಾರತದ ತಿರಂಗಾ! ವಾಘಾದಲ್ಲಿ 350 ಅಡಿ ಎತ್ತರದ ಧ್ವಜ ಸ್ಥಾಪನೆ

Pinterest LinkedIn Tumblr

indian flag

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳ ಪ್ರತಿಷ್ಠೆಯ ಗಡಿ ಪ್ರದೇಶದವಾದ ಅಟ್ಟಾರಿ-ವಾಘಾ ಗಡಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅತಿ ಎತ್ತರದಲ್ಲಿ ದೇಶದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ಎಷ್ಟು ಎತ್ತರವಿರಲಿದೆ ಎಂದರೆ ವಾಘಾದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಲಾಹೋರನಲ್ಲಿಯೂ ಈ ತ್ರಿವರ್ಣ ಧ್ವಜವನ್ನು ವೀಕ್ಷಿಸಬಹುದಾಗಿದೆ.

ಇಂತಹುದೊಂದು ಎತ್ತರದ ಮತ್ತು ದೊಡ್ಡ ತ್ರಿವರ್ಣ ಧ್ವಜ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ವಾಘಾ ಗಡಿಯಲ್ಲಿರುವ ವೀಕ್ಷಕರ ಗ್ಯಾಲರಿ ವಿಸ್ತರಣೆಯ ಭಾಗವಾಗಿ ಇದನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಭಾರತದ ತ್ರಿವರ್ಣ ಧ್ವಜಸ್ಥಂಭ ಸುಮಾರು 350 ಅಡಿ ಎತ್ತರವಿರಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಇಷ್ಟು ಎತ್ತರದ ಧ್ವಜ ಸ್ಥಂಭದಲ್ಲಿ ಹಾರಾಡುವ ಭಾರತದ ತ್ರಿವರ್ಣ ಧ್ವಜವನ್ನು ಪಾಕಿಸ್ತಾನದಿಂದಲೂ ವೀಕ್ಷಣೆ ಮಾಡ ಬಹುದಾಗಿದೆ.

ಪ್ರಸ್ತುತ ಇಡೀ ಭಾರತದಲ್ಲಿಯೇ ಅತ್ಯಂತ ಎತ್ತರದ ತ್ರಿವರ್ಣ ಧ್ವಜ ಸ್ಥಂಭ ಜಾರ್ಖಂಡ್ ನ ರಾಂಚಿಯಲ್ಲಿದ್ದು, ಇದು 293 ಅಡಿ ಎತ್ತರ ಹೊಂದಿದೆ. ಅಂತೆಯೇ ಇದರ ಧ್ವಜ ಕೂಡ ಸಾಕಷ್ಟು ದೊಡ್ಡದಾಗಿದ್ದು, 66*99 ಅಳತೆಯಷ್ಟಿದೆ. 2016 ಜನವರಿಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಧ್ವಜಾರೋಹಣ ಮಾಡಿದ್ದರು. ಇದಕ್ಕೂ ಮೊದಲು ಫರೀದಾಬಾದ್‍ನಲ್ಲಿರುವ 250 ಅಡಿ ಎತ್ತರದ ಧ್ವಜ ದೇಶದ ಅತಿ ಎತ್ತರದ ಧ್ವಜವಾಗಿತ್ತು. ಇದೀಗ ವಾಘಾ ಗಡಿಯಲ್ಲಿ 50 ಅಡಿ ಎತ್ತರದ ಧ್ವಜ ನಿರ್ಮಾಣವಾದರೆ ಇದೇ ದೇಶದ ಅತೀ ಎತ್ತರದ ಧ್ವಜವೆಂಬ ದಾಖಲೆ ಬರೆಯಲಿದೆ.

ಪಾಕಿಸ್ತಾನದಿಂದಲೂ ಕಾಣಲಿದೆ ಭಾರತದ ತ್ರಿವರ್ಣ ಧ್ವಜ
ವಾಘಾ ಗಡಿಯಿ೦ದ ಸುಮಾರು 18 ಕಿಮೀ ದೂರದಲ್ಲಿರುವ ಪ೦ಜಾ ಬ್‍ನ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ನಲ್ಲಿಯೂ ಈ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ವೀಕ್ಷಿಸಲು ಸಾಧ್ಯವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಇಲ್ಲಿನ ಬಿಎಸ್ ಎಫ್ ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಯಾದವ್ ಅವರು ಮಾಹಿತಿ ನೀಡಿದ್ದಾರೆ. ಆದರೆ ವಾಘಾ ಗಡಿಯಲ್ಲಿ ಮಳೆ, ತೀವ್ರ ಗಾಳಿಯಿ೦ದ ಧ್ವಜ ರಕ್ಷಣೆ ಮಾಡುವ ಬಗ್ಗೆ ಚಿಂತೆ ಮೂಡುತ್ತಿದ್ದು, ಈ ಬಗ್ಗೆಯೂ ತಜ್ಞರಿಂದ ಸಲಹೆ ಪಡೆಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ತ್ರಿವರ್ಣ ಧ್ವಜಕ್ಕೆ ಬಿಗಿ ಭದ್ರತೆ
ಇನ್ನು ದೇಶದ ಅತೀ ಎತ್ತರದ ತ್ರಿವರ್ಣ ಧ್ವಜಕ್ಕೆ ವ್ಯಾಪಕ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಧ್ವಜದ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿಧ೯ರಿಸಲಾಗಿದೆ. ಇನ್ನು ಈ ಬಹು ನಿರೀಕ್ಷಿತ ಬಾನೆತ್ತರದ ತ್ರಿವರ್ಣ ಧ್ವಜ ಸ್ಥಾಪನೆ ಕಾರ್ಯ 2017ರ ಜನವರಿಯೊಳಗೆ ಪೂಣ೯ಗೊಳ್ಳಲಿದೆ ಎ೦ದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸನ ಸ೦ಖ್ಯೆ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ವಾಘಾ ಗಡಿಯಲ್ಲಿರುವ ಭಾರತದ ಪ್ರೇಕ್ಷಕರ ಗ್ಯಾಲರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಪ್ರೇಕ್ಷಕರು ಆಗಮಿಸುತ್ತಿರುವುದರಿಂದ ಗ್ಯಾಲರಿಯಲ್ಲಿ ಸ್ಥಳಾವಕಾಶವಿಲ್ಲದೆ ಪ್ರೇಶ್ರಕರು ಪರದಾಡುವಂತಾಗಿದೆ. ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕ್ ನಡುವೆ ನಡೆಯುವ ಐತಿಹಾಸಿಕ ರಿಟ್ರೀಟ್ ಕಾಯ೯ಕ್ರಮಕ್ಕೆ ಪ್ರತಿ ನಿತ್ಯ ಸಾವಿರಾರು ಸ೦ಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿನ ಗ್ಯಾಲರಿಗಳಲ್ಲಿ ಕೇವಲ 7000 ಆಸನ ವ್ಯವಸ್ಥೆ ಮಾತ್ರ ಇದ್ದು, ಇದರಿ೦ದ ಹೆಚ್ಚಿನ ವೀಕ್ಷಕರು ಕಾಯ೯ಕ್ರಮ ನೋಡದೆಯೇ ಮರಳುವ೦ತಾಗುತ್ತದೆ. ಹೀಗಾಗಿ ಇಲ್ಲಿನ ಆಸನ ವ್ಯವಸ್ಥೆಗಳನ್ನು 20,000ಕ್ಕೇರಿಸಲು ನಿಧ೯ರಿಸಲಾಗಿದೆ.

ಆನ್‍ಲೈನ್ ಬುಕಿ೦ಗ್ ಸೇವೆಗೆ ಶೀಘ್ರದಲ್ಲೇ ಚಾಲನೆ
ವಾಘಾಗಡಿಯಲ್ಲಿ ದಶಕಗಳಿಂದ ನಡೆದು ಬಂದಿರುವ ಭಾರತ-ಪಾಕಿಸ್ತಾನ ದೇಶಗಳ ಸೈನಿಕರ ಐತಿಹಾಸಿಕ ರಿಟ್ರೀಟ್ ಕಾಯ೯ಕ್ರಮ ವೀಕ್ಷಣೆಗಾಗಿ ಪ್ರವಾಸಿಗರು ಮತ್ತು ಪ್ರೇಕ್ಷಕರು ಇನ್ನು ಮುಂದೆ ಆನ್ ಲೈನ್ ನಲ್ಲಿಯೇ ಆಸನಗಳನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ವೀಕ್ಷಕರಿಗೆ ಕಾಯ೯ಕ್ರಮಕ್ಕೆ ಆಗಮಿಸುವ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವ ಮತ್ತು ಆಸನಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿ೦ದ ಆನ್ ಲೈನ್ ಬುಕಿ೦ಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬಿಎಸ್ ಎಫ್ ಅಧಿಕಾರಿಗಳು ಹೇಳಿದ್ದಾರೆ.

Write A Comment