ರಾಷ್ಟ್ರೀಯ

ರಕ್ಷಣಾ ಕ್ಷೇತ್ರಕ್ಕೆ ಕಾಲಿಟ್ಟ ರಿಲಯನ್ಸ್; ಉಕ್ರೇನ್ ನೊಂದಿಗೆ 50 ಸಾವಿರ ಕೋಟಿ ಒಪ್ಪಂದ

Pinterest LinkedIn Tumblr

anil-ambani

ನವದೆಹಲಿ: ದೇಶದ ವಿವಿಧ ವಲಯಗಳಲ್ಲಿ ಉಧ್ಯಮವನ್ನು ನಡೆಸುತ್ತಿರುವ ಖ್ಯಾತ ರಿಲಯನ್ಸ್ ಸಂಸ್ಥೆ ಇದೀಗ ರಕ್ಷಣಾ ಕ್ಷೇತ್ರಕ್ಕೂ ಕಾಲಿಟ್ಟಿದ್ದೂ, ಅನಿಲ್ ಅಂಬಾನಿ ನೇತೃತ್ವದ ಸಂಸ್ಥೆ ಉಕ್ರೇನ್ ಮೂಲದ ಸಂಸ್ಥೆಯೊಂದಿಗೆ ಬರೊಬ್ಬರಿ 50 ಸಾವಿರ ಕೋಟಿ ರು. ಒಪ್ಪಂದಕ್ಕೆ ಸಹಿ ಹಾಕಿದೆ.

ಮೂಲಗಳ ಪ್ರಕಾರ ಉಕ್ರೇನ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಆ್ಯಂಟನೋವ್ ಸಂಸ್ಥೆಯೊಂದಿಗೆ ರಿಲಯನ್ಸ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಮಧ್ಯಮ ಗಾತ್ರದ ಸರಕು ಸಾಗಣಾ ವಿಮಾನ ಮತ್ತು ಸೇನಾ ವಾಹನ ತಯಾರಿಕೆಯಲ್ಲಿ ಈ ಎರಡೂ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಅಂತೆಯೇ ಇಂದು ಉಕ್ರೇನ್ ಅಧ್ಯಕ್ಷ ಪೆಟ್ರೋ ಪೊರೊಶೆಂಕೊ ಅವರೊಂದಿಗೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ತಂಡ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ ರಿಲಯನ್ಸ್ ಸಂಸ್ಥೆಯೊಂದಿಗೆ ಮತ್ತೆರಡು ಖಾಸಗಿ ಸಂಸ್ಥೆಗಳು ಈ ಒಪ್ಪಂದದಲ್ಲಿ ಕೈಜೋಡಿಸಲಿದ್ದು, ವಿಮಾನ ಮತ್ತು ಸೇನಾ ವಾಹನಗಳ ಉತ್ಪಾದನೆ, ಉಪಕರಣಗಳ ಜೋಡಣೆ ಮತ್ತು ದುರಸ್ತಿ ಕುರಿತ ವಿಚಾರಗಳಲ್ಲಿ ತೊಡಗಿಸಿಕೊಳ್ಳಲಿವೆ. ತನ್ನ ಈ ಒಪ್ಪಂದ ಮೂಲಕ ರಿಲಯನ್ಸ್ ಸಂಸ್ಥೆ ಭಾರತದಲ್ಲಿ ಬಿಎಂಪಿ 2, ಸಶಸ್ತ್ರ ಸೇನಾ ವಾಹನ, ಚಾಲಕ ರಹಿತ ವಿಮಾನ ಮತ್ತು ಗ್ಯಾಸ್ ಟರ್ಬೈನ್ ಗಳನ್ನು ಉತ್ಪಾದನೆ ಮಾಡಲಿದೆ. ಈ ಎಲ್ಲ ಉತ್ಪಾದನೆಗಳಲ್ಲಿ ಭಾರತೀಯ ನೌಕಾಪಡೆಗಾಗಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಿಲಯನ್ಸ್ ಸಂಸ್ಥೆಯ ಸೇನಾ ವಿಮಾನ ಕಾರ್ಯಾಚರಣೆಯಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಸಂಸ್ಥೆ ಕೈಜೋಡಿಸುತ್ತಿದ್ದು, ಸುಮಾರು 300 ಲಘು ವಿಮಾನಗಳನ್ನು ಸಿದ್ಧಪಡಿಸಲಿದೆ. ಇನ್ನು ಈ ಬಗ್ಗೆ ರಿಲಯನ್ಸ್ ಸಂಸ್ಥೆ ಹೇಳಿಕೆ ಪ್ರಕಟಿಸಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ರಿಲಯನ್ಸ್ ಡಿಫೆನ್ಸ್ ಸಂಸ್ಥೆ ತಲೆ ಎತ್ತಿದ್ದು, ಮುಂದಿನ ದಿನಗಳಲ್ಲಿ ತನ್ನ ಉತ್ಪಾದನೆಯನ್ನು ಮತ್ತಷ್ಟು ಏರಿಕೆ ಮಾಡುವುದಾಗಿ ಸಂಸ್ಥೆ ಹೇಳಿದೆ.

2015ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗಳೂ ರಕ್ಷಣಾ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು.

Write A Comment