ಮನೋರಂಜನೆ

ಒಲಿಂಪಿಕ್ಸ್‍ಗೆ ಸಲ್ಮಾನ್ ರಾಯಭಾರಿಯಾಗಿದ್ದಕ್ಕೆ ಕುಸ್ತಿ ಪಟು ಯೋಗೇಶ್ವರ್ ದತ್ ಆಕ್ಷೇಪ

Pinterest LinkedIn Tumblr

Yogeshwar Dutt And  Salman Khan

ನವದೆಹಲಿ: ರಿಯೋ ಒಲಿಂಪಿಕ್ಸ್‌ ಗೆ ತೆರಳುವ ಭಾರತ ತಂಡದ ರಾಯಭಾರಿಯಾಗಿ ನಟ ಸಲ್ಮಾನ್ ಖಾನ್ ರನ್ನು ನೇಮಿಸಲಾಗಿದೆ. ಭಾರತದ ಅಥ್ಲೆಟಿಕ್ಸ್ ತಂಡದ ರಾಯಭಾರಿ ಆಗಿ ನಟ ಸಲ್ಮಾನ್ ಆಯ್ಕೆ ಮಾಡಿರುವುದಕ್ಕೆ ಕುಸ್ತಿಪಟು ಯೋಗೇಶ್ವರ್ ದತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್‌(2012)ನಲ್ಲಿ ಕಂಚಿನ ಪದಕ ವಿಜೇತ ಭಾರತದ ಹೆಮ್ಮೆಯ ಕುಸ್ತಿಪಟು ಯೋಗೇಶ್ವರ್ ದತ್ ಅವರು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ) ಶನಿವಾರ ಕೈಗೊಂಡ ನಿರ್ಣಯ ಬೇಸರ ತರಿಸಿದೆ ಎಂದಿದ್ದಾರೆ.

ಐಒಎ ಮುಖ್ಯ ಕಚೇರಿಯಲ್ಲಿ ಶನಿವಾರ ಸಭೆ ಸೇರಿ ರಾಯಭಾರಿಯನ್ನು ಆಯ್ಕೆ ಮಾಡಲಾಯಿತು. ರಾಯಭಾರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಲ್ಮಾನ್‌ ಖಾನ್ ಗೆ ಶಾರೂಖ್ ಖಾನ್ ಹಾಗೂ ಹಿರಿಯ ನಟ ಅಮಿತಾಬ್ ಬಚ್ಚನ್ ತೀವ್ರ ಪೈಪೋಟಿ ನೀಡಿದ್ದರು. ಸಲ್ಮಾನ್ ಆಯ್ಕೆಗೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ದತ್ ಆಕ್ರೋಶ ವ್ಯಕ್ತಪಡಿಸಿ, ‘ರಾಯಭಾರಿಯ ಕೆಲಸ ಏನು ಎಂಬುದು ನನಗೆ ಯಾರಾದರೂ ವಿವರಿಸಬಲ್ಲಿರಾ? ದೇಶದ ಜನರನ್ನು ಈ ರೀತಿ ಮೂರ್ಖರನ್ನಾಗಿ ಮಾಡುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸಲ್ಮಾನ್ ಖಾನ್ ಕ್ರೀಡಾ ಲೋಕಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿರುವ ದತ್. ಹಿರಿಯ ಲೆಜೆಂಡ್ ಗಳಾದ ಪಿ.ಟಿ ಉಷಾ, ಮಿಕಾ ಸಿಂಗ್ ಅಂತವರನ್ನು ಬಿಟ್ಟು ಸಲ್ಮಾನ್ ಖಾನ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಸುಲ್ತಾನ್ ಸಿನಿಮಾದ ಪಚಾರಕ್ಕಾಗಿ, ಉದ್ದೇಶ ಪೂರ್ವಕವಾಗಿ ಈ ಗಿಮಿಕ್ ಮಾಡುತ್ತಿದ್ದಾರೆ. ಆದರೆ ಕ್ರೀಡಾ ವೇದಿಕೆಯಲ್ಲಿ ಸುಲ್ತಾನ್ ಚಿತ್ರದ ಪ್ರಚಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ನಟ ಸಲ್ಮಾನ್ ಖಾನ್ ರನ್ನು ಭೇಟಿ ಮಾಡಲು ಯೋಗೇಶ್ವರ್ ದತ್ ಅಪಾಯಿಂಟ್ ಮೆಂಟ್ ಪಡೆದಿದ್ದಾರೆ.

Write A Comment