ರಾಷ್ಟ್ರೀಯ

ತಿರುಪತಿ ದೇವಸ್ಥಾನದಿಂದ ಬ್ಯಾಂಕ್ ಗೆ 1,311 ಕೆ.ಜಿ.ಚಿನ್ನ ಠೇವಣಿ

Pinterest LinkedIn Tumblr

Tirupati Temple

ಚೆನ್ನೈ: ಚಿನ್ನ ನಗದೀಕರಣ ಯೋಜನೆಯಡಿ ಸಾರ್ವಜನಿಕ ವಲಯದ ಬ್ಯಾಂಕ್ ಗೆ 1,311 ಕೆ.ಜಿ ಚಿನ್ನವನ್ನು ಠೇವಣಿ ಮಾಡಲಾಗಿದೆ ಎಂದು ತಿರುಪತಿ ಬಾಲಾಜಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಅಲ್ಲದೆ ಮತ್ತಷ್ಟು ಚಿನ್ನ ಠೇವಣಿ ಮಾಡಲು ಉತ್ತಮ ನಿಯಮಗಳು ರೂಪಿಸುವಂತೆ ಕೇಳಿಕೊಂಡಿರುವುದಾಗಿ ಹೇಳಿದೆ.

1,311 ಕೆ.ಜಿ. ಶುದ್ಧ ಚಿನ್ನದ ಗಟ್ಟಿಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸೋಮವಾರ ಡೆಪೋಸಿಟ್ ಮಾಡಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಪ್ರಕಟಣೆಯಲ್ಲಿ ತಿಳಿಸಿದೆ.

ಅತಿ ಹೆಚ್ಚು ಅಂದರೆ ವಾರ್ಷಿಕ ಶೇ,1,75ರಷ್ಟು ಬಡ್ಡಿ ನೀಡಲು ಮುಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಚಿನ್ನ ನಗದೀಕರಣ ಯೋಜನೆಯಡಿ ಮೂರು ವರ್ಷದ ಅವಧಿಗಾಗಿ ದೇವಸ್ಥಾನ ಚಿನ್ನ ಡೆಪೋಸಿಟ್ ಮಾಡಲಾಗಿದೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಡಿ.ಸಾಂಬಶಿವ ರಾವ್ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 20,000 ಟನ್‌ಗಳಷ್ಟು ಚಿನ್ನ ಠೇವಣಿಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಚಿನ್ನ ನಗದೀಕರಣ ಯೋಜನೆಗೆ ಚಾಲನೆ ನೀಡಿದ್ದರು.

Write A Comment