ರಾಷ್ಟ್ರೀಯ

ಆರ್‌ಬಿಐ: ಬಡ್ಡಿ ದರ ಇನ್ನಷ್ಟು ಇಳಿಯುವ ನಿರೀಕ್ಷೆ

Pinterest LinkedIn Tumblr

RBIWEBನವದೆಹಲಿ (ಪಿಟಿಐ): ಹಣದುಬ್ಬರ ಗಣನೀಯವಾಗಿ ತಗ್ಗಿರುವುದರಿಂದ ಮತ್ತು ಈ ಬಾರಿ ವಾಡಿಕೆಗಿಂತ ಉತ್ತಮ ಮಳೆ ಲಭಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ಬಡ್ಡಿ ದರದಲ್ಲಿ 50 ಮೂಲಾಂಶಗಳಷ್ಟು ಇಳಿಕೆ ಮಾಡಬಹುದು ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ಮೋರ್ಗನ್ ಸ್ಟ್ಯಾನ್ಲಿ ಅಂದಾಜು ಮಾಡಿದೆ.
ಆರ್‌ಬಿಐ ಜೂನ್‌ 7 ರಂದು ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ. ‘ಇದೇ ಪರಿಸ್ಥಿತಿ ಮುಂದುವರಿದರೆ ಖಂಡಿತ ಬಡ್ಡಿ ದರದಲ್ಲಿ ಇನ್ನಷ್ಟು ಇಳಿಕೆ ನಿರೀಕ್ಷಿಸಬಹುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
‘ಹಣದುಬ್ಬರ ಮತ್ತು ಮುಂಗಾರು ಈ ಎರಡು ಅಂಶಗಳು ಬಡ್ಡಿ ದರ ನಿರ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ’ ಎಂದು ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಹೇಳಿದ್ದಾರೆ.
ಮಾರ್ಚ್‌ ತಿಂಗಳಲ್ಲಿ ಹಣದುಬ್ಬರ 6 ತಿಂಗಳಲ್ಲೇ ಕನಿಷ್ಠ ಮಟ್ಟವಾದ ಶೇ 4.83ಕ್ಕೆ ಇಳಿಕೆ ಕಂಡಿದೆ. 2017ರ ಅಂತ್ಯದ ವೇಳೆಗೆ ಹಣದುಬ್ಬರವನ್ನು ಶೇ 5ರ ಮಿತಿಯೊಳಗೆ ತರಬೇಕು ಎಂಬ ಗುರಿಯನ್ನು ಆರ್‌ಬಿಐ ಹೊಂದಿದೆ.
2016–17ನೇ ಸಾಲಿನಲ್ಲಿ ಹಣದುಬ್ಬರ ಶೇ 4.5ಕ್ಕೆ ತಗ್ಗಲಿದೆ ಎಂದು ಮೋರ್ಗನ್ ಸ್ಟ್ಯಾನ್ಲಿ ಮುನ್ನೋಟ ನೀಡಿದೆ.

Write A Comment