ರಾಷ್ಟ್ರೀಯ

ಕೇವಲ 8,888 ರು.ಗೆ ಸರ್ಕಾರಿ ಬಂಗಲೆ ಬಾಡಿಗೆಗೆ ಪಡೆದಿದ್ದ ಮಹಾಚೌಕಾಶಿ ಪ್ರಿಯಾಂಕಾ ಗಾಂಧಿ

Pinterest LinkedIn Tumblr

priyanka-gನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, 14 ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 53,421 ರುಪಾಯಿ ಬಾಡಿಗೆ ಇದ್ದ ಸರ್ಕಾರಿ ಬಂಗಲೆಯನ್ನು ಕೇವಲ 8,888 ರುಪಾಯಿ ಬಾಡಿಗೆಗೆ ಪಡೆಯುವ ಮೂಲಕ ತಾನೊಬ್ಬ ಉತ್ತಮ ಚೌಕಾಶಿ ಮಾಡುವ ವ್ಯಕ್ತಿ ಎಂಬುದನ್ನು ಸಾಬೀತು ಮಾಡಿದ್ದರು.
ಅತ್ಯಂತ ಸಿರಿವಂತ, ವಿಲಾಸೀ ಹಾಗೂ ವೈಭವೋಪೇತ ಸರ್ಕಾರಿ ಬಂಗಲೆಗಳಿರುವ ಲುಟೇನ್ಸ್‌ ಪ್ರದೇಶದಲ್ಲಿ 2,765.18 ಚದರ ಮೀಟರ್‌ ಸ್ಥಳಾವಕಾಶದ ಬೃಹತ್‌ ಸರ್ಕಾರಿ ಬಂಗಲೆಯನ್ನು ಪ್ರಿಯಾಂಕಾ ಗಾಂಧಿ ಕೇವಲ 8,888 ರುಪಾಯಿಗಳ ತಿಂಗಳ ಬಾಡಿಗೆಯ ಮೇಲೆ ಪಡೆದುಕೊಳ್ಳಲು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದೊಂದಿಗೆ ಯಶಸ್ವೀ ಚೌಕಾಶಿ ನಡೆಸಿದ್ದರು.
ಪ್ರಿಯಾಂಕಾ ಗಾಂಧಿ ಅವರು ವಿಶೇಷ ಭದ್ರತಾ ರಕ್ಷಣೆಯನ್ನು ಪಡೆದಿದ್ದ ಅತೀ ಗಣ್ಯ ವ್ಯಕ್ತಿಯಾಗಿದ್ದರಿಂದ ಆಕೆಗೆ ಲುಟೇನ್ಸ್‌ ಪ್ರದೇಶದಲ್ಲಿನ ಭವ್ಯ ಹಾಗೂ ಬೃಹತ್‌ ಬಂಗಲೆಯಲ್ಲಿ ವಾಸಮಾಡುವ ಭಾಗ್ಯ ಸರ್ಕಾರದ ವತಿಯಿಂದಲೇ ಪ್ರಾಪ್ತವಾಗಿತ್ತು.
ಪ್ರಿಯಾಂಕಾ ಅವರಿಗೆ ವಿಶೇಷ ರಕ್ಷಣೆಯಡಿ ವಾಸಕ್ಕೆಂದು ನೀಡಲಾಗಿದ್ದ ಬಂಗಲೆಗೆ ಅಂದು 53,421. ರೂ. ತಿಂಗಳ ಬಾಡಿಗೆ ನಿಗದಿಯಾಗಿತ್ತು. ಆದರೆ ಅಷ್ಟೊಂದು ದೊಡ್ಡ ಮೊತ್ತ ಬಾಡಿಗೆ ನೀಡುವ ಆರ್ಥಿಕ ತಾಕತ್ತು ತನಗಿಲ್ಲ ಎಂದು ಚೌಕಾಶಿ ಮಾಡಿದ ಪ್ರಿಯಾಂಕಾ, ಅಂತಿಮವಾಗಿ ಕೇವಲ 8,888 ರು.ಗಳ ತಿಂಗಳ ಬಾಡಿಗೆಯನ್ನು ಸರ್ಕಾರ ನಿಗದಿಪಡಿಸುವಂತೆ ಮಾಡುವಲ್ಲಿ ಸಫ‌ಲರಾಗಿದ್ದರು. 2002ರ ಮೇ 7ರಂದು ಪ್ರಿಯಾಂಕಾ ಅವರು ಸರಕಾರಕ್ಕೆ ತನ್ನ ಬಂಗಲೆ ಬಾಡಿಗೆಯನ್ನು ಇಳಿಸುವಂತೆ ಬರೆದಿದ್ದ ಪತ್ರದಿಂದ ಈಗ ಬಹಿರಂಗವಾಗಿದೆ.
ಈಗ ಪ್ರಿಯಾಂಕಾ ಗಾಂಧಿ ಅವರು ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ಆರನೇ ನಮೂನೆಯ ಈ ಭವ್ಯ ಹಾಗೂ ಬೃಹತ್‌ ಬಂಗಲೆಗೆ ಕೊಡುತ್ತಿರುವ ತಿಂಗಳ ಬಾಡಿಗೆ 31,300 ರು. ಪ್ರಿಯಾಂಕಾ ಅವರ ಇಷ್ಟೊಂದು ದೊಡ್ಡ ಸರಕಾರಿ ಬಂಗಲೆಯ ಹತ್ತನೇ ಒಂದರಷ್ಟು ಸ್ಥಳಾವಕಾಶವಿರುವ ದೆಹಲಿಯಲ್ಲಿನ ಯಾವುದೇ ಬಂಗಲೆಗೆ ಇಂದಿನ ದಿನಗಳಲ್ಲಿ 1.50 ಲಕ್ಷ ರು.ಗಳಿಂದ 4.50 ಲಕ್ಷ ರು.ಗಳ ವರೆಗೆ ಬಾಡಿಗೆ ಚಾಲ್ತಿಯಲ್ತಿದೆ.

Write A Comment