ರಾಷ್ಟ್ರೀಯ

50 ವರ್ಷ ವಯಸ್ಸಿನ ಮಹಿಳೆಯನ್ನು ತಿಂದು ತೇಗಿದ ಸಿಂಹಗಳು! ಆಹಾರ ಹುಡುಕಿ ಕೊಂಡು ಬಂದ ಸಿಂಹಗಳ ಗುಂಪು

Pinterest LinkedIn Tumblr

lion

ರಾಜ್‍ಕೋಟ್: ಸಿಂಹಗಳ ಗುಂಪೊಂದು ಅಮ್ರೇಲಿ ಧಾರಿ ತಾಲೂಕಿನ ಭರದ್ ಹಳ್ಳಿಯಲ್ಲಿ 50 ವರ್ಷ ವಯಸ್ಸಿನ ಮಹಿಳೆ ಮೇಲೆ ದಾಳಿ ನಡೆಸಿ, ಆಕೆಯ ದೇಹವನ್ನು ಕಿತ್ತು ತಿಂದಿರುವ ಘಟನೆ ನಡೆದಿದೆ.

ಲಬೂ ಸೋಲಂಕಿ ಮತ್ತು ಮೂವರು ಕುಟುಂಬ ಸದಸ್ಯರು ಮಾವಿನ ತೋಟದಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಬಂದ ಸಿಂಹಗಳ ಗುಂಪು ಆಕೆಯ ಮೇಲೆ ದಾಳಿ ನಡೆಸಿ, 400 ಮೀಟರ್ ದೂರಕ್ಕೆ ಎಳೆದೋಯ್ದು ಕಿತ್ತು ತಿಂದಿವೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಮಹಿಳೆಯ ಶವ ಪತ್ತೆ ತೀವ್ರ ಶೋಧ ಕಾರ್ಯ ನಡೆಸಿ, ತುಂಡು ತುಂಡಾದ ಮಹಿಳೆಯ ಶವವನ್ನು ಪತ್ತೆ ಹಚ್ಚಿದ್ದಾರೆ. ಒಂದು ಸಿಂಹ ಪಂಜರದಲ್ಲಿ ಸಿಕ್ಕಿಕೊಂಡಿದೆ.

ಸದರಿ ಸ್ಥಳದಲ್ಲಿ ಸಿಂಹಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಈ ಬಗ್ಗೆ ಸ್ಥಳೀಯರು ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಮಾ.19ರಂದು ಇದೇ ಸ್ಥಳದಲ್ಲಿ ಸಿಂಹವೊಂದು 60 ವರ್ಷ ವಯಸ್ಸಿನ ಅಂಬರ್ದಿ ಹಳ್ಳಿಯಲ್ಲಿ ಜಿನ ಮಕ್ವಾನ ಎಂಬಾತನ ಮೇಲೆ ದಾಳಿ ನಡೆಸಿ, ತಿಂದು ಹಾಕಿತ್ತು.

ಸಿಂಹವನ್ನು ಕೆರಳಿಸದ ಹೊರತು ಅವು ಯಾರ ಮೇಲೂ ದಾಳಿ ನಡೆಸುವುದಿಲ್ಲ. ಆದರೆ ತೀವ್ರ ಬರಗಾಲದಿಂದಾಗಿ ಆಹಾರ ಸಿಗದೆ ತತ್ತರಿಸಿರುವ ಸಿಂಹಗಳನ್ನು ಮನುಷ್ಯನ ಮೇಲೆ ದಾಳಿಗೆ ಮುಂದಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ಸಿಂಹಗಳಿಂದ ರಕ್ಷಣೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.

Write A Comment