
ಅಹಮದಾಬಾದ್: ದೂರದ ಅಮೆರಿಕದ ಮಹಿಳೆಯೊಬ್ಬರು ಭಾರತದ ಸ್ಲಂನ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಫೇಸ್ಬುಕ್ನಲ್ಲಿ ಅರಳಿದ ಇವರಿಬ್ಬರ ಪ್ರೀತಿ ಭಾಷೆಗಳನ್ನ ಮೀರಿ ಮದುವೆಯಲ್ಲಿ ಸುಖಾಂತ್ಯವಾಗಿದೆ.
ಅಮೆರಿಕ ಮೂಲದ 41 ವರ್ಷ ವಯಸ್ಸಿನ ಎಮಿಲಿ ಗುಜರಾತ್ನ ಅಹಮದಾಬಾದ್ನ ಕೊಳಗೇರಿಯ ಹುಡುಗ 23 ವರ್ಷದ ಹಿತೇಶ್ ಚೌದಾನನ್ನ ವರಿಸಿದ್ದಾರೆ. ಇವರಿಬ್ಬರಿಗೆ ವಯಸ್ಸಿನ ಅಂತರವಿದ್ರೂ ಪ್ರೀತಿಸಿ ಮದುವೆಯಾಗಿದ್ದಾರೆ.
ಪ್ರೇಮಿಗಳನ್ನ ಒಂದು ಮಾಡಿದ್ದು ಫೇಸ್ಬುಕ್ : ಎಮಿಲಿ ಮತ್ತು ಹಿತೇಶ್ನನ್ನ ಒಂದಾಗಿಸಿರೋದು ಫೇಸ್ಬುಕ್. ಅಚಾನಕ್ ಆಗಿ ಇವರಿಬ್ರೂ ಫೇಸ್ಬುಕ್ನಲ್ಲಿ ಫ್ರೆಂಡ್ಸ್ ಆದ್ರು. ಅಷ್ಟರಲ್ಲೇ ಎಮಿಲಿಗೆ ಹಿತೇಶ್ ಮೇಲೆ ಪ್ರೀತಿ ಉಂಟಾಯ್ತು. ನಂತರ ಚಾಟಿಂಗ್ ಶುರುವಾಯ್ತು. ಈತನಿಗೋ ಇಂಗ್ಲಿಷ್ ಬರ್ತಿರ್ಲಿಲ್ಲ. ಆಕೆಗೆ ಹಿಂದಿ ಅರ್ಥ ಆಗ್ತಿರ್ಲಿಲ್ಲ. ಕೊನೆಗೆ ಹಿತೇಶ್ ಫೇಸ್ಬುಕ್ ಮೆಸೇಜ್ಗಳನ್ನೆಲ್ಲಾ ಗೂಗಲ್ ಟ್ರಾನ್ಸ್ಲೇಟರ್ಗೆ ಹಾಕಿ ಅರ್ಥ ಮಾಡಿಕೊಳ್ತಿದ್ದ. ಆಮೇಲೆ ಹಿಂದಿಯಲ್ಲಿ ಸಂದೇಶ ಬರೆದು ಅದನ್ನ ಇಂಗ್ಲೀಷ್ಗೆ ತರ್ಜುಮೆ ಮಾಡಿ ಎಮಿಲಿಗೆ ರವಾನಿಸ್ತಿದ್ದ. ನಂತರ ಇಬ್ಬರೂ ವೀಡಿಯೋ ಚಾಟಿಂಗ್ ಆರಂಭಿಸಿದ್ರು. ಆಮೇಲೆ ಇವರಿಬ್ಬರ ಪ್ರೇಮ ಗಟ್ಟಿಯಾಯ್ತು.
ಕೊನೆಗೆ ಅಹಮದಾಬಾದ್ಗೆ ಬಂದ ಎಮಿಲಿ ಅದೇ ದಿನ ಹಿತೇಶ್ನನ್ನ ವರಿಸಿದ್ರು. ಹಿಂದೂ ಸಂಪ್ರದಾಯದಂತೆ ಇಬ್ಬರು ಪರಸ್ಪರ ಒಪ್ಪಿ ಮದುವೆಯಾದ್ರು. ಎಮಿಲಿ ಅಮೆರಿಕಾದ ಮೊಂಟಾನಾದಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದ ಚೆಲುವೆ. ಆದರೆ ಈಗ ತಾನು ಪ್ರೀತಿಸಿದ ಅಹಮದಾಬಾದಿನ ಸ್ಲಂನ ಹುಡುಗನನ್ನ ಮದುವೆಯಾಗಿದ್ದಾಳೆ.