ರಾಷ್ಟ್ರೀಯ

ಅಗ್ನಿ ದುರಂತದ ನಂತರ ಕೇರಳ ದೇಗುಲದ ಅಧಿಕಾರಿಗಳು ನಾಪತ್ತೆ; ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು

Pinterest LinkedIn Tumblr

kerala-kollam-templ-fire12

ಕೊಲ್ಲಂ: ಕೇರಳದ ಮೂಕಾಂಬಿಕ ದೇಗುಲದಲ್ಲಿ ಅಗ್ನಿ ದುರಂತ ಸಂಭವಿಸಿದ ನಂತರ ದೇಗುಲದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ದೇವಾಲಯದ ಹಿರಿಯ ಅಧಿಕಾರಿಗಳ ವಿರುದ್ಧ ಶಿಕ್ಷಾರ್ಹ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಘಟನೆ ಸಂಭವಿಸಿದ ನಂತರ ಮಾಧ್ಯಮಪ್ರತಿನಿಧಿಗಳು ದೇಗುಲದ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದ್ದಾರೆ ಆದರೆ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಇನ್ನು ಪಟಾಕಿ ಪ್ರದರ್ಶನವನ್ನು ಆಯೋಜಿಸಿದ್ದ, ಘಟನೆಯಲ್ಲಿ ಗಾಯಗೊಂಡ ಸುರೇಂದ್ರನ್ ಹಾಗೂ ಉಮೇಶ್ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತಿರುವನಂತಪುರಮ್ ನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಲ್ಲಂ ಜಿಲ್ಲೆಯಲ್ಲಿನ ಪಾರವೂರ್ ನಲ್ಲಿರುವ ಮೂಕಾಂಬಿಕ ದೇಗುಲದಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಲಾಗುತ್ತಿತ್ತು. ಎಂದಿನಂತೆ ಈ ಬಾರಿಯೂ ದೇಗುಲದಲ್ಲಿ ಬಾಣಬಿರುಸುಗಳ ಪ್ರದರ್ಶನದ ನಡೆಸಲಾಗಿದೆ. ಆದರೆ ಪಟಾಕಿಗಳು ಆಕಾಶದಲ್ಲಿ ಹಾರುವ ಬದಲು ನೆಲದಲ್ಲೇ ಸಿಡಿದ ಪರಿಣಾಮ ಘಟನೆಯಲ್ಲಿ 109 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Write A Comment