ರಾಷ್ಟ್ರೀಯ

ಸಾಕಿದ ಹಸುಗಳ ಮೇಲಿನ ಪ್ರೀತಿಯಿಂದ ಪತ್ನಿಯನ್ನೇ ತೊರೆದ ಮುಸಲ್ಮಾನ ವ್ಯಕ್ತಿ

Pinterest LinkedIn Tumblr

cow

ಕಾನ್ಪುರ: ಗೋಹತ್ಯೆ, ಗೋಮಾಂಸ ಭಕ್ಷಣೆ ವಿಚಾರವಾಗಿ ಮುಸ್ಲಿಮರ ಮೇಲೆ ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಇದು ಪ್ರಸ್ತುತವಾದ ವಿಷಯ. 13 ವರ್ಷಗಳ ಹಿಂದೆ ಕಾನ್ಪುರದ ಮುಸ್ಲಿಂ ವ್ಯಕ್ತಿಯೊಬ್ಬ ತಾನು ಸಾಕಿದ ಹಸುಗಳಿಗಾಗಿ ಪತ್ನಿಯನ್ನೇ ತೊರೆದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಹಸುಗಳು ಅಥವಾ ನಾನು-ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪತ್ನಿ ಕೇಳಿದಾಗ ಕಾನ್ಪುರದ ಅಫಾಕ್‌ ಅಲಿ ಸಾಕಿದ ಹಸುಗಳ ಮೇಲಿನ ಪ್ರೀತಿಯಿಂದಾಗಿ ಪತ್ನಿಯನ್ನೇ ತೊರೆದಿದ್ದಾರೆ.

2001ರಲ್ಲಿ ಮದುವೆಯಾಗಿದ್ದ ಜೋಡಿಯನ್ನು ಒಂದುಗೂಡಿಸಲು ಕುಟುಂಬಸ್ಥರು, ಗ್ರಾಮಸ್ಥರು ಕೊನೆಗೆ ಪಂಚಾಯಿತಿ ನಡೆಸಿದ ಪ್ರಯತ್ನಗಳೂ ವಿಫಲವಾದವು. ಹಸುಗಳ ವಿಚಾರದಲ್ಲಿ ಅಲಿ ತನ್ನ ನಿರ್ಧಾರ ಬದಲಿಸಲೇ ಇಲ್ಲ. ಪತಿಯ ನಿರ್ಧಾರದಿಂದ ಬೇಸತ್ತು ಮನೆ ತೊರೆದ ಅಫ್ರೋಜ್‌ ಜಹಾನ್‌ ಮತ್ತೆ ಮನೆ ಸೇರಲೇ ಇಲ್ಲ.

ಅಲಿ ತನ್ನ 15 ನೇ ವಯಸ್ಸಿನಲ್ಲಿ ಮೊದಲ ಹಸು ಖರೀದಿಸಿದ್ದ. ಈಗ ಆತನಿಗೆ 55 ವರ್ಷ. ಸದ್ಯ ಅವನ ಬಳಿ 14 ಹಸುಗಳಿವೆ. ಸಸ್ಯಹಾರಿಯಾಗಿರುವ ಅಲಿ ಬೆಳಗ್ಗೆ ಹಾಲು ಕರೆದ ನಂತರ, ಮೇವು ಖರೀದಿಗೆ ತೆರಳುತ್ತಾರೆ. ಸಮೀಪದ ಕಾಡಿನಿಂದ ತಾಜಾ ಹಸಿರು ಮೇವನ್ನೂ ತರುತ್ತಾರೆ. ರಾಸುಗಳ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಅಲಿ, ಕಾಲಕಾಲಕ್ಕೆ ಅವುಗಳ ಆರೋಗ್ಯ ತಪಾಸಣೆಯನ್ನೂ ಮಾಡಿಸುತ್ತಾರೆ.

ಹಸುಗಳನ್ನು ಮಾರಾಟಮಾಡುವಂತೆ ಪತ್ನಿ ಪೀಡಿಸುತ್ತಿದ್ದಳು. ಆದರೆ, ಅದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ನೆಮ್ಮದಿಯಿಂದ ಇದ್ದೇನೆ ನನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಇಲ್ಲ ಎಂದು ಅಲಿ ಹೇಳುತ್ತಾರೆ.

Write A Comment