ರಾಷ್ಟ್ರೀಯ

ಕನ್ಹಯ್ಯ ಕುಮಾರ್ ನ ಭಗತ್ ಸಿಂಗ್ ಗೆ ಹೋಲಿಕೆ: ಶಶಿ ತರೂರ್ ವಿರುದ್ಧ ಟ್ವಿಟರ್ ನಲ್ಲಿ ಟೀಕೆ

Pinterest LinkedIn Tumblr

Shashi Tharoor

ನವದೆಹಲಿ: ಜೆಎನ್ ಯು ವಿವಿಯಲ್ಲಿ ಆಯೋಜಿಸಲಾಗಿದ್ದ ಜೆಎನ್ ಯು ಹಾಗೂ ರಾಷ್ಟ್ರೀಯತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್, ಕನ್ಹಯ್ಯ ಕುಮಾರ್ ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಹೋಲಿಕೆ ಮಾಡಿದ್ದರು. ಈಗ ಅದು ಟ್ವಿಟರ್ ನಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.

ಟ್ವಿಟರ್ ಬಳಕೆದಾರರು ಸಂಸದ ಶಶಿತರೂರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತರೂರ್ ಭಾಷಣಕ್ಕಿಂತ ಟ್ವಿಟರ್ ಟೀಕೆಗಳೇ ವೈರಲ್ ಆಗತೊಡಗಿದೆ. ಶಶಿತರೂರ್ ಕನ್ಹಯ್ಯ ಕುಮಾರ್ ನನ್ನು ಭಗತ್ ಸಿಂಗ್ ಗೆ ಹೋಲಿಸಿರುವುದನ್ನು ಖಂಡಿಸಿರುವ ಬಾಲಿವುಡ್ ನಟ ಪರೇಶ್ ರಾವಲ್, ಶಶಿ ತರೂರ್ ಅವರ ಬುದ್ಧಿಮಟ್ಟ ಅವರ ಶೂ ಅಳತೆಗಿಂತ ಕಡಿಮೆ ಇದೆ ಎಂದು ವ್ಯಂಗ್ಯವಾಡಿದ್ದಾರೆ. ” ಶಶಿತರೂರ್ ಭಗತ್ ಸಿಂಗ್ ಅವರನ್ನು ಕನ್ಹಯ್ಯ ಕುಮಾರ್ ಗೆ ಹೋಲಿಕೆ ಮಾಡಿದ್ದಾರೆ, ನಾವು ಶಶಿತರೂರ್ ಅವರನ್ನು ರಾಹುಲ್ ಗಾಂಧಿಗೆ ಹೋಲಿಕೆ ಮಾಡುವ ಸಮಯ ಬಂದಿದೆ ಎಂದು ಮತ್ತೊಬ್ಬ ಟ್ವೀಟ್ ಬಳಕೆದಾರ ವ್ಯಂಗ್ಯವಾಡಿದ್ದಾರೆ.

Write A Comment