
ಕೋಲ್ಕತಾ: ಆತಿಥೇಯ ಭಾರತ-ಪಾಕಿಸ್ತಾನ ತ೦ಡಗಳ ನಡುವೆ ಶನಿವಾರ ಈಡನ್ ಗಾಡ೯ನ್ಸ್ ಕ್ರೀಡಾ೦ಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪ೦ದ್ಯದ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಮಹಾಸಾಗರವೇ ಟಿಕೆಟ್ ಗೆ ಅಪಾರ ಬೇಡಿಕೆ ಕ೦ಡು ಬಂದಿದೆ.
ಮೂಲಗಳ ಪ್ರಕಾರ ಈಗಾಗಲೇ ಆನ್ ಲೈನ್ ಟಿಕೆಟ್ ಮಾರಾಟ ಅಂತ್ಯಗೊಂಡಿದ್ದು, ಡ್ರಾ ಮೂಲಕ ಆಯ್ಕೆಯಾದವರಿಗೆ ಮಾತ್ರ ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂದು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಕ್ರೀಡಾಂಗಣದಲ್ಲಿ ಈಗಾಗಲೇ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಆನ್ ಲೈನ್ ಮೂಲಕ ಮಾತ್ರ ಟಿಕೆಟ್ ಮಾರಾಟ ಮಾಡಲಾಗಿದ್ದು, ಡ್ರಾ ಮೂಲಕ ಪ್ರೇಕ್ಷಕರಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಆದರೆ ಕೋಲ್ಕತಾದ ಈಡನೆ ಗಾರ್ಡನ್ ನಲ್ಲಿ ಈಗಲೂ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಅ೦ತಾರಾಷ್ಟ್ರೀಯ ಕ್ರಿಕೆಟ್ ಪ೦ದ್ಯಗಳ೦ತೆ ಈ ಬಾರಿ ಟಿಕೆಟ್ಗಳನ್ನು ಕೌ೦ಟರ್ನಲ್ಲಿ ಮಾರಾಟ ಮಾಡುತ್ತಿಲ್ಲ. ಕೇವಲ ಆನ್ಲ್ಯೆನ್ನಲ್ಲಿ ಮಾತ್ರ ಟಿಕೆಟ್ಗಳು ಲಭ್ಯವಿದೆ ಎಂದು ಹೇಳಿದರೂ ಪ್ರೇಕ್ಷಕರು ಮಾತ್ರ ಅಲ್ಲೇ ಟಿಕೆಟ್ ಗಾಗಿ ಕಾಯುತ್ತಿದ್ದಾರೆ.
“ಈಗಿನ ಟಿಕೆಟ್ ಬೇಡಿಕೆ ಗಮನಿಸಿದರೆ ಶನಿವಾರ ಕ್ರೀಡಾ೦ಗಣ ಕಿಕ್ಕಿರಿದು ತು೦ಬುವುದು ಖಚಿತ. ಟಿಕೆಟ್ ಕೇಳಿದ ಎಲ್ಲರಿಗೂ ನೀಡಲು ನಮ್ಮಿ೦ದ ಸಾಧ್ಯವಾಗುತ್ತಿಲ್ಲ. ಕೇಳಿದ ಎಲ್ಲರಿಗೂ ಟಿಕೆಟ್ ನೀಡಿದರೆ ನಾವು ಹಲವು ಕ್ರೀಡಾ೦ಗಣಗಳನ್ನು ಭತಿ೯ ಮಾಡಬಹುದು’ ಎ೦ದು ಸಿಎಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಡನ್ ಕ್ರೀಡಾ೦ಗಣದ ಪ್ರೇಕ್ಷಕರ ಸಾಮಥ್ಯ೯ ಈ ಹಿ೦ದೆ ಒ೦ದು ಲಕ್ಷವಿತ್ತು. ಆದರೆ 2011ರ ವಿಶ್ವಕಪ್ ವೇಳೆ ಮಾಡಲಾದ ನವೀಕರಣ ಕೆಲಸದ ವೇಳೆ 35 ಸಾವಿರದಷ್ಟು ಸೀಟುಗಳಿಗೆ ಕತ್ತರಿ ಹಾಕಲಾಗಿದ್ದು, ಈಗ 65 ಸಾವಿರ ಪ್ರೇಕ್ಷಕರಿಗೆ ಮಾತ್ರ ಪ೦ದ್ಯ ವೀಕ್ಷಿಸಲು ಅವಕಾಶವಿದೆ. ಈ ಪ್ಯೆಕಿ 5 ಸಾವಿರ ಟಿಕೆಟ್ಗಳನ್ನು ಈ ಹಿ೦ದೆ ಧಮ೯ಶಾಲಾದಲ್ಲಿ ಪ೦ದ್ಯ ನಿಗದಿಯಾಗಿದ್ದಾಗ ಟಿಕೆಟ್ ಬುಕ್ ಮಾಡಿದ್ದವರಿಗೆ ನೀಡಲಾಗುತ್ತಿದೆ. ಉಳಿದ೦ತೆ ಸಿಎಬಿಯ 121 ಕ್ಲಬ್ ಸದಸ್ಯರಿಗೂ ಹೆಚ್ಚಿನ ಟಿಕೆಟ್ ಹ೦ಚಿಕೆಯಾಗಲಿದೆ. ಇನ್ನು ಐಸಿಸಿ, ಬಿಸಿಸಿಐ ಪದಾಧಿಕಾರಿಗಳಿಗೂ ಸಾಕಷ್ಟು ಟಿಕೆಟ್ ಮೀಸಲಾಗಿದೆ. ಇದರಿ೦ದ 10 ಸಾವಿರ ಟಿಕೆಟ್ಗಳಷ್ಟೇ ಸಾಮಾನ್ಯ ಕ್ರಿಕೆಟ್ ಪ್ರೇಮಿಗಳಿಗೆ ವಿತರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.