ಅಂತರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಇಂಟರ್‌ನೆಟ್ ಸ್ಟಾರ್ ! ಟ್ವಿಟರ್‌ನಲ್ಲಿ 18 ಮಿಲಿಯನ್ …ಫೇಸ್‌ಬುಕ್‌ನಲ್ಲಿ 32 ಮಿಲಿಯನ್ ಫಾಲೋವರ್‌

Pinterest LinkedIn Tumblr

Narendra-Modi1 (1)

ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿವರು ಇಂಟರ್‌ನೆಟ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ ಎಂದು ಟೈಮ್ ಮ್ಯಾಗಜಿನ್ ಅಭಿಪ್ರಾಯ ಪಟ್ಟಿದೆ. ಮೋದಿಯವರು ರಾಜತಾಂತ್ರಿಕತೆಗೂ ಸಾಮಾಜಿಕ ತಾಣವನ್ನು ಬಳಸುತ್ತಿದ್ದು ಅವರು ಇಂಟರ್‌ನೆಟ್ ಸ್ಟಾರ್ ಎಂದಿದೆ ಟೈಮ್.

ಪಾಕಿಸ್ತಾನಕ್ಕೆ ನೀಡಿದ ಅನಿರೀಕ್ಷಿತ ಭೇಟಿ ಬಗ್ಗೆ ಮೋದಿಯವರು ಟ್ವೀಟ್ ಮಾಡುವ ಮೂಲಕ ಜನರಿಗೆ ತಿಳಿಸಿದ್ದರು. ಇಂಟರ್‌ನೆಟ್ ಲೋಕದಲ್ಲಿ ಜನರ ಮೇಲೆ ಪ್ರಭಾವ ಬೀರಿದ 30 ಜನರ ಪಟ್ಟಿಯನ್ನು ಟೈಮ್ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋದಿಯೇ ಅಗ್ರಸ್ಥಾನದಲ್ಲಿದ್ದಾರೆ.

ಕಳೆದ ವರ್ಷವೂ ಮೋದಿ ಈ ಪಟ್ಟಿಯಲ್ಲಿದ್ದರು. ಮೋದಿ ಸೇರಿದಂತೆ ಅಮೆರಿಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡೊನಾಲ್ಡ್ ಟ್ರಂಪ್, ಟಿವಿ ನಿರೂಪಕಿ ಕಿಂ ಕಾರ್ದಶಿಯಾನ್, ಆಕೆಯ ಪತಿ ಕಾಯ್ನೆ ವೆಸ್ಟ್, ಜೆಜೆ ರೌಲಿಂಗ್, ಮಾಜಿ ಒಲಿಂಪಿಕ್ ಪಟು ಕೇಟಲಿನ್ ಜೆನರ್, ಫುಟ್ಬಾಲ್ ಪಟು ರೊನಾಲ್ಡೋ ಮೊದಲಾದವರು ಈ ಪಟ್ಟಿಯಲ್ಲಿದ್ದಾರೆ. ಜಗತ್ತಿನ ಜನರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳ ಪಟ್ಟಿಯಾಗಿದೆ ಇದು.

ನರೇಂದ್ರ ಮೋದಿ ಅವರಿಗೆ ಟ್ವಿಟರ್‌ನಲ್ಲಿ 18 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಫೇಸ್‌ಬುಕ್‌ನಲ್ಲಿ 32 ಮಿಲಿಯನ್ ಮಂದಿ ಫಾಲೋವರ್‌ಗಳಿದ್ದಾರೆ. ತಮ್ಮ ವಿಷಯಗಳನ್ನು ಜನರಿಗೆ ತಲುಪಿಸಲು ಮೋದಿ ಸಾಮಾಜಿಕ ತಾಣಗಳನ್ನೇ ಬಳಸುತ್ತಿದ್ದಾರೆ ಎಂದು ಟೈಮ್ ಮ್ಯಾಗಜಿನ್ ಉಲ್ಲೇಖಿಸಿದೆ.

ಪಾಕ್‌ಗೆ ಅನಿರೀಕ್ಷಿತ ಭೇಟಿ ನೀಡಿ ಶರೀಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ಹೀಗೆ ಎಲ್ಲವನ್ನೂ ಮೋದಿ ಸೋಷ್ಯಲ್ ಮೀಡಿಯಾದಲ್ಲಿ ತಿಳಿಸಿದ್ದರು ಎಂಬ ವಿಷಯವನ್ನು ಇಲ್ಲಿ ಉದಾಹರಣೆಯಾಗಿ ನೀಡಲಾಗಿದೆ. ಅಷ್ಟೇ ಅಲ್ಲ ಅಫ್ಘಾನ್ ಅಧ್ಯಕ್ಷರಿಗೆ ತಪ್ಪಾದ ಮಾಹಿತಿಯಿಂದ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಎಡವಟ್ಟು ಮಾಡಿಕೊಂಡಿರುವುದರ ಬಗ್ಗೆಯೂ ಟೈಮ್ ಉಲ್ಲೇಖಿಸಿದೆ.

Write A Comment